ಚಿರು ಸರ್ಜಾ ಅಗಲಿದ ದಿನ: ಅಣ್ಣನ ನೆನೆದ ತಮ್ಮ ಧ್ರುವ ಸರ್ಜಾ

ಬುಧವಾರ, 7 ಜೂನ್ 2023 (10:09 IST)
ಬೆಂಗಳೂರು:  ಚಿರಂಜೀವಿ ಸರ್ಜಾ ಮೃತಪಟ್ಟು ಇಂದಿಗೆ ಮೂರು ವರ್ಷ ಕಳೆದಿದೆ. ಆ ನೋವು ಸರ್ಜಾ ಕುಟುಂಬಕ್ಕೆ ಎಂದಿಗೂ ಮಾಗದ ಗಾಯವಾಗಿದೆ.

2020 ರ ಜೂನ್ 7 ರಂದು ಚಿರು ಸರ್ಜಾ ಹೃದಯಾಘತಕ್ಕೊಳಗಾಗಿ ಅಕಾಲಿಕವಾಗಿ ಸಾವನ್ನಪ್ಪಿದ್ದರು. ಅವರ ನಿಧನ ಪತ್ನಿ ಮೇಘನಾ ಸರ್ಜಾ, ಚಿರು ಕುಟುಂಬಕ್ಕೆ ತೀವ್ರ ಆಘಾತ ತಂದಿತ್ತು.

ಇಂದು ಚಿರು ಪುಣ್ಯತಿಥಿಯಾಗಿದ್ದು, ಅಣ್ಣನನ್ನು ನೆನೆದು ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ನೀನು ನನಗೆ ದೇವರು ಕೊಟ್ಟ ಅತಿ ದೊಡ್ಡ ಉಡುಗೊರೆ. ಯಾವತ್ತೂ ನನ್ನ ಜೊತೆಗೇ ಇರುವೆ ಎಂದು ಧ್ರುವ ಅಣ್ಣನ ಜೊತೆಗಿನ ಫೋಟೋ ಹಾಕಿಕೊಂಡು ಸ್ಮರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ