ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿರುವ ಕೆಜಿಎಫ್ 2

ಮಂಗಳವಾರ, 6 ಜೂನ್ 2023 (09:49 IST)
Photo Courtesy: Twitter
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಿಡುಗಡೆಯಾಗಿ ವರ್ಷವೇ ಕಳೆದರೂ ಅದರ ಹವಾ ಮಾತ್ರ ನಿಂತಿಲ್ಲ. ಇದೀಗ ರಾಕಿ ಭಾಯಿ ಜಪಾನ್ ಭಾಷೆಯಲ್ಲಿ ಅಬ್ಬರಿಸಲಿದ್ದಾನೆ.

ಕೆಜಿಎಫ್ 1 ಮತ್ತು ಕೆಜಿಎಫ್ 2 ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಗಳಿಕೆ ವಿಚಾರದಲ್ಲಿ ಹೊಸ ದಾಖಲೆ ಬರೆದವು. ಕನ್ನಡ ಚಿತ್ರವನ್ನು ಪರಭಾಷೆಯವರೂ ತಿರುಗಿ ನೋಡುವಂತೆ ಮಾಡಿದ ಸಿನಿಮಾಗಳಿವು.

ಈ ಸಿನಿಮಾ ಇದೀಗ ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗಲಿದೆ. ಜುಲೈ 14 ರಂದು ಕೆಜಿಎಫ್ ಸರಣಿ ಸಿನಿಮಾಗಳು ಜಪಾನ್ ಭಾಷೆಯಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಪ್ರಚಾರ ಕೆಲಸವೂ ಶುರುವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ