ಬರ್ತ್ ಡೇ ದಿನವೇ ಗುಡ್ ನ್ಯೂಸ್ ಕೊಟ್ಟ ರಕ್ಷಿತ್ ಶೆಟ್ಟಿ

ಬುಧವಾರ, 7 ಜೂನ್ 2023 (08:30 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿನ್ನೆಯಷ್ಟೇ ಜನ್ಮದಿನ ಆಚರಿಸಿಕೊಂಡಿದ್ದರು. ಈ ನಡುವೆ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ದಿನವೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ರಕ್ಷಿತ್ ಶೆಟ್ಟಿ ಅಭಿನಯಿಸಿರುವ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದೆ ಎಂಬ ಸುದ್ದಿಯನ್ನು ರಕ್ಷಿತ್ ನೀಡಿದ್ದಾರೆ.

ಸಪ್ತಸಾಗರದಾಚೆ ಎಲ್ಲೊ ಸೈಡ್ ಎ ಮತ್ತು ಬಿ ಆಗಿ ಮೂಡಿಬರಲಿದೆ. ಈಗಾಗಲೇ ಶೂಟಿಂಗ್ ಮುಗಿದಿದ್ದು, ಜೂನ್ 15 ಕ್ಕೆ ರಿಲೀಸ್ ಡೇಟ್ ಘೋಷಣೆಯಾಗಲಿದೆ. 777 ಚಾರ್ಲಿ ಸಕ್ಸಸ್ ಬಳಿಕ ರಕ್ಷಿತ್ ಅಭಿನಯಿಸಿರುವ ಮತ್ತೊಂದು ಸಿನಿಮಾ ಇದು. ಈ ಸಿನಿಮಾದ ಪೋಸ್ಟರ್ ಗಳು ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ