ಕ್ರಿಶ್ಚಿಯನ್ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಚಿರು-ಮೇಘನಾ ಜೋಡಿ
ಸೋಮವಾರ, 30 ಏಪ್ರಿಲ್ 2018 (07:14 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಅವರು ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರು ಕೋರಮಂಗಲದ ಸೇಂಟ್ ಆಂಥೋನಿಸ್ ಫೈರಿ ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಸಮಾರಂಭ ನೆರವೇರಿದ್ದು, ಕುಟುಂಬದವರು, ಬಂಧುಗಳು ಹಾಗೂ ಆತ್ಮೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚಿತ್ರರಂಗದ ಗಣ್ಯರು, ಕಲಾವಿದರು ವಧುವರರಿಗೆ ಶುಭಕೋರಿದ್ದಾರೆ. ಮೇ 2 ರಂದು ಹಿಂದೂ ಸಂಪ್ರದಾಯದಂತೆ ಅರಮನೆ ಮೈದಾನದಲ್ಲಿ ಇವರ ವಿವಾಹ ಮತ್ತೊಮ್ಮೆ ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ