'ನಮ್ಮಪ್ಪ ನನಗೆ 'ಗೌಡ' ಎಂದು ಹೆಸರಿಟ್ಟಿದ್ದು ತಪ್ಪಾ?- ಹೆಚ್.ಡಿ.ದೇವೆಗೌಡ

ಸೋಮವಾರ, 30 ಏಪ್ರಿಲ್ 2018 (06:56 IST)
ಬೆಂಗಳೂರು : ದೇವೇಗೌಡರು ಕೇವಲ ಗೌಡ ಸಮುದಾಯದ ಪರ ಎಂದು ಟೀಕೆ ಮಾಡಿರುವ ಹಿನ್ನಲೆಯಲ್ಲಿ ಇದೀಗ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಈ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.


ಇದಕ್ಕೆ  ಪ್ರತಿಕ್ರಿಯಿಸಿದ ದೇವೇಗೌಡರು 'ನಮ್ಮಪ್ಪ ನನಗೆ 'ಗೌಡ' ಎಂದು ಹೆಸರಿಟ್ಟಿದ್ದು ತಪ್ಪಾ? ನಾನು ಯಾರಿಗೆ ಮೋಸ ಮಾಡಿದ್ದೀನಿ?' ಎಂದು ಪ್ರಶ್ನಿಸಿದ್ದಾರೆ. ಹಾಗೇ ನಾನು ಯಾವ ಪಾಪವನ್ನೂ ಮಾಡಿಲ್ಲ. ಆದರೆ, ನನ್ನ ಬೆನ್ನಿಗೆ ಚೂರಿ ಹಾಕುವವರ ಸಂಖ್ಯೆ ಹೆಚ್ಚಿದೆ. ನಮ್ಮಪ್ಪ ನನಗೆ ಗೌಡ ಎಂದು ಹೆಸರಿಟ್ಟರು. ಯಾವ ವರ್ಗಕ್ಕೆ ಮೋಸ ಮಾಡಿದ್ದೇನೆ ಹೇಳಿ' ಎಂದು ಪ್ರಶ್ನಿಸುವುದರ ಮೂಲಕ ಬೇಸರವನ್ನು ವ್ಯಕ್ತಪಡಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ