’ಸಿಂಗಂ 3’ ಚಿತ್ರದಲ್ಲಿ ಪತ್ರಕರ್ತೆಯಾಗಿ ಸದ್ದು ಮಾಡಿದ ನಟಿ ಶ್ರುತಿ ಹಾಸನ್ ಎಲ್ಲರ ಗಮನಸೆಳೆದಿದ್ದಾರೆ. ಚಿತ್ರದಲ್ಲಿ ಶ್ರುತಿ ಪಾತ್ರ ತುಂಬಾ ಚಿಕ್ಕದಾಯಿತೆಂದು, ಪ್ರಾಮುಖ್ಯತೆಯೇ ಇಲ್ಲ ಎಂದು ಅಭಿಮಾನಿಗಳು, ಸ್ನೇಹಿತರು ಕೇಳುತ್ತಿದ್ದಾರಂತೆ. ಈ ವಿಷಯದ ಬಗ್ಗೆ ಶ್ರುತಿ ಹಾಸನ್ ಪ್ರತಿಕ್ರಿಯಿಸಿದ್ದಾರೆ.
ಅರೆ ಸೂಪರ್ ಆಗಿ ಅಭಿನಯಿಸಿದ್ದಾರೆ ಎಂದು ಅನ್ನಿಸಿಕೊಳ್ಳಲು ಒಂದು ಸನ್ನಿವೇಶ ಸಾಕು. ಸಿನಿಮಾದಲ್ಲಿ 60 ಸೀನ್‍ಗಳಿದ್ದರೆ, ಎಲ್ಲಾ ಸೀನ್‌ಗಳಲ್ಲಿ ಕಾಣಿಸಿಕೊಂಡರೂ ಪ್ರಯೋಜನ ಇರಲ್ಲ. ಬಾಯಿಗೆ ರುಚಿ ನೀಡುವ ಒಂದೇ ಒಂದು ತುತ್ತು ತಿಂದರೂ ಹೊಟ್ಟೆ ತುಂಬುತ್ತದೆ. ಪಾತ್ರಗಳು ಅಷ್ಟೇ ಎಂದಿದ್ದಾರೆ.