ದರ್ಶನ್ ಸರ್ ಜೊತೆ ನಾನಿದ್ದೇನೆ ಎಂದ ಧ್ರುವ ಸರ್ಜಾ: ಕೆಡಿ ನೋಡಲಿ ಅಂತಾನಾ ಎಂದ ಡಿಬಾಸ್ ಫ್ಯಾನ್ಸ್

Krishnaveni K

ಶುಕ್ರವಾರ, 1 ಆಗಸ್ಟ್ 2025 (10:21 IST)
Photo Credit: X
ಬೆಂಗಳೂರು: ಬಿಗ್ ಬಾಸ್ ಪ್ರಥಮ್, ನಟಿ ರಮ್ಯಾ ಜೊತೆಗಿನ ಡಿಬಾಸ್ ಫ್ಯಾನ್ಸ್ ವಾರ್ ವಿಚಾರವಾಗಿ ಮಾತನಾಡಿದ್ದ ನಟ ಧ್ರುವ ಸರ್ಜಾ ನಾನು ದರ್ಶನ್ ಸರ್ ಪರವಾಗಿ ಇದ್ದೇನೆ ಎಂದಿದ್ದರು. ಇದಕ್ಕೆ ಡಿಬಾಸ್ ಫ್ಯಾನ್ಸ್ ಟ್ರೋಲ್ ಮಾಡಿದ್ದು ಎಲ್ಲಾ ಕೆಡಿ ಸಿನಿಮಾ ನೋಡಿ ಅಂತಾನಾ ಎಂದಿದ್ದಾರೆ.

ಬಿಗ್ ಬಾಸ್ ಪ್ರಥಮ್ ತನ್ನ ಮೇಲೆ ದರ್ಶನ್ ಅಭಿಮಾನಿಗಳು ದಾಳಿ ಮಾಡಿದ್ದಾರೆ ಎಂದು ದೊಡ್ಡ ರಾಮಾಯಣವನ್ನೇ ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಧ್ರುವ ಸರ್ಜಾ ಈ ವಿಚಾರದಲ್ಲಿ ನಾನು ಪ್ರಥಮ್ ನನ್ನು ಒಪ್ಪಲ್ಲ. ಫ್ಯಾನ್ಸ್ ಮಾಡಿದ್ದರೆ ಅದಕ್ಕೆ ದೂರು ಕೊಡಲಿ. ಅದು ಬಿಟ್ಟು ಉಪವಾಸ ಮಾಡ್ತೀನಿ, ದರ್ಶನ್ ಬರಬೇಕು ಎಂದೆಲ್ಲಾ ಹೇಳೋದು ಸರಿಯಲ್ಲ. ಈ ವಿಚಾರದಲ್ಲಿ ನಾನು ದರ್ಶನ್ ಸರ್ ಪರವಾಗಿದ್ದೇನೆ ಎಂದಿದ್ದರು.

ಇದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ದರ್ಶನ್ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ. ಕೆಲವು ಸಮಯದ ಹಿಂದೆ ದರ್ಶನ್ ಮತ್ತು ಧ್ರುವ ಸರ್ಜಾ ನಡುವೆ ವೈಮನಸ್ಯವಾಗಿತ್ತು. ಆದರೆ ಈಗ ಧ್ರುವ ಸರ್ಜಾ ಕೆಡಿ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದ್ದು, ದರ್ಶನ್ ಗೆ ತಮ್ಮ ಬೆಂಬಲ ಎಂದಿದ್ದಾರೆ.

ಹೀಗಾಗಿ ಡಿಬಾಸ್ ಫ್ಯಾನ್ಸ್ ಎಲ್ಲಾ ಕೆಡಿ ಸಿನಿಮಾಗಾಗಿ ಗಿಮಿಕ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಡಿಬಾಸ್ ಅಭಿಮಾನಿಗಳು ನೋಡದೇ ಇದ್ರೆ ಕೆಡಿ ಸಿನಿಮಾ ಸೋತು ಹೋಗುತ್ತದೆ ಎಂದು ಭಯ ಬಂದಿರಬೇಕು. ಅದಕ್ಕೇ ಈಗ ದರ್ಶನ್ ಪರ ಎಂದಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

ಆದರೆ ಕೆಲವರು ಧ್ರುವ ಸರ್ಜಾರ ಅಭಿಪ್ರಾಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏನೇ ಅಸಮಾಧಾನಗಳಿದ್ದರೂ ಸತ್ಯದ ಪರ ನಿಂತಿದ್ದಾರೆ ಎಂದು ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ