ಬಿಗ್ ಬಾಸ್ ಗಾಗಿ ಎರಡು ಧಾರವಾಹಿಗಳಿಗೆ ಕತ್ತರಿ ಹಾಕುತ್ತಿರುವ ಕಲರ್ಸ್ ವಾಹಿನಿ

ಮಂಗಳವಾರ, 1 ಅಕ್ಟೋಬರ್ 2019 (09:55 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಇನ್ನೇನು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಏಳನೇ ಆವೃತ್ತಿ ಪ್ರಸಾರವಾಗಲಿದೆ. ಇದಕ್ಕಾಗಿ ವಾಹಿನಿ ಇದೀಗ ಸಮಯ ಹೊಂದಿಸಿಕೊಳ್ಳಲು ಎರಡು ಧಾರವಾಹಿಗಳಿಗೆ ಕತ್ತರಿ ಹಾಕುತ್ತಿದೆ.


ರಾಧಾರಮಣ ಧಾರವಾಹಿ ಮುಗಿಸುವ ಸುದ್ದಿ ಈಗಾಗಲೇ ಹೊರ ಹಾಕಿರುವ ವಾಹಿನಿ ಇದೀಗ ಮತ್ತೊಂದು ಧಾರವಾಹಿಗೆ ಕತ್ತರಿ ಪ್ರಯೋಗ ನಡೆಸುವ ಸಿದ್ಧತೆ ನಡೆಸಿದೆ. ಕೆಲವೇ ಸಮಯದ ಮೊದಲು ಆರಂಭವಾಗಿದ್ದ ರಂಗನಾಯಕಿ ಧಾರವಾಹಿಯೂ ಮುಕ್ತಾಯವಾಗುತ್ತಿದೆ.

ಬಿಗ್ ಬಾಸ್ ಗಾಗಿ ಈ ಎರಡು ಧಾರವಾಹಿಗೆ ಕತ್ತರಿ ಪ್ರಯೋಗ ನಡೆಸಲಾಗುತ್ತಿದೆ. ಇದು ಕೆಲವು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಕಲರ್ಸ್ ವಾಹಿನಿಯಲ್ಲಿ ಎಂದೋ ಕೊನೆಗೊಳ್ಳಬೇಕಿದ್ದ ಅಗ್ನಿಸಾಕ್ಷಿ, ಲಕ್ಷ್ಮೀ ಬಾರಮ್ಮ ಬಿಟ್ಟು ಉಳಿದ ಧಾರವಾಹಿಯನ್ನು ಕೊನೆಗಾಣಿಸುತ್ತಿರುವುದು ಯಾಕೆ ಎಂದು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ