ಬೆಂಗಳೂರು: 6.5 ಲಕ್ಷ ಸಾಲ ಪಡೆದು ಹಣ ವಾಪಾಸ್ ನೀಡದೆ ವಂಚನೆ ಮಾಡಿದ ಪ್ರಕರಣದಲ್ಲಿ ಯುವ ನಿರ್ದೇಶಕಿ ವಿಸ್ಮಯ ಗೌಡ ವಿರುದ್ಧ ದೂರು ದಾಖಲಾಗಿದೆ. ಹಣ ವಾಪಾಸ್ ನೀಡದೆ ಕೊಡದೇ ಮೋಸ ಮಾಡಿದ್ದಾರೆ ಎಂದು ಬಸವೇಶ್ವರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
6.5 ಲಕ್ಷ ಸಾಲ ಪಡೆದು ಹಣ ನೀಡದೇ ವಿಸ್ಮಯ ಗೌಡ ವಂಚಿಸಿದ್ದಾರೆಂದು ಎಂದು ಹಿಮಾನ್ವಿ ಬಿಂದು ದೂರು ದಾಖಲಿಸಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಎಫ್‌ಐಆರ್ ದಾಖಲಿಸಲಾಗಿದೆ.
ವಿಸ್ಮಯ ಅವರು ಈ ಹಿಂದೆ ಡಿಯರ್ ಕಣ್ಮಣಿ ಸಿನಿಮಾ ನಿರ್ದೇಶನ ಮಾಡೋದಾಗಿ ವಿಸ್ಮಯ ಹೇಳಿದ್ದರು. ಈ ಸಿನಿಮಾದಲ್ಲಿ ಬಿಗ್‌ಬಾಸ್ ಖ್ಯಾತಿಯ, ಡ್ಯಾನರ್ ಕಿಶನ್ ಬಿಳಗಲಿ, ಕಿರುತೆರೆ ನಟಿ ಭವ್ಯಾ ಗೌಡ ಅಭಿನಯಿಸುತ್ತಿರುವುದಾಗಿ ಹೇಳಿದ್ದರು.