ನಟಿ ಮೇಲೆ ಲೈಂಗಿಕ ದೌರ್ಜನ್ಯ ಕೇಸ್: ನಟ ದಿಲೀಪ್ ಮನವಿ ತಿರಸ್ಕರಿಸಿದ ನ್ಯಾಯಾಲಯ
2017 ರಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ವಿರುದ್ಧ ಈಗಲೂ ತನಿಖೆ ಮುಂದುವರಿದಿದೆ. ಆದರೆ 2017 ರ ನವಂಬರ್ ನಲ್ಲಿ ಅಂತಿಮ ವರದಿ ಸಲ್ಲಿಸಿ, 2020 ರಲ್ಲಿ ಆರೋಪ ಪಟ್ಟಿ ಹೊರಿಸಲಾಗಿತ್ತು. ಪ್ರಸ್ತುತ ದಿಲೀಪ್ ರನ್ನು ಮಾತ್ರ ತನಿಖೆಗೊಳಪಡಿಸಲು ಬಾಕಿಯಿದೆ. ಹೀಗಾಗಿ ಅವರ ವಿರುದ್ಧ ಮುಂದಿನ ತನಿಖೆ ನಡೆಸಲು ಅವಕಾಶ ಕೊಡಬಾರದು ಎಂದು ದಿಲೀಪ್ ಪರ ವಕೀಲರು ಕೇರಳ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.
ಆದರೆ ಅವರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ವಿಚಾರಣೆಯು ಕೊನೆಯ ಹಂತದಲ್ಲಿದೆ. ಈಗ ತನಿಖೆಗೆ ಪೂರ್ವಾನುಮತಿಯ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.