ಲಾಕ್ ಡೌನ್ ಮುಗಿಯುವವರೆಗೂ ದರ್ಶನ್ ಅಭಿಮಾನಿಗಳಿಂದ ಬಡವರಿಗೆ ಊಟ

ಸೋಮವಾರ, 30 ಮಾರ್ಚ್ 2020 (09:31 IST)
ಮೈಸೂರು: ಕೊರೋನಾ ತಡೆಗೆ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ದಿನಗೂಲಿ ನೌಕರರಿಗೆ, ಬಡವರಿಗೆ ನಿತ್ಯದ ಊಟಕ್ಕೆ ಸಮಸ್ಯೆಯಾಗಿದೆ. ಇಂತಹವರ ನೆರವಿಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಳಗ ಮುಂದಾಗಿದೆ.


ಮೈಸೂರಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಊಟದ ವ್ಯವಸ್ಥೆ ಮಾಡುತ್ತಿರುವ ದರ್ಶನ್ ಅಭಿಮಾನಿಗಳ ಸಂಘ ಲಾಕ್ ಡೌನ್ ಮುಗಿಯುವವರೆಗೂ ಊಟ ವಿತರಿಸುವ ಕೆಲಸ ಮಾಡುವುದಾಗಿ ಹೇಳಿಕೊಂಡಿದೆ.

ಇತ್ತ ಕಿಚ್ಚ ಸುದೀಪ್ ಅಭಿಮಾನಿಗಳ ಬಳಗವೂ ಇದೇ ಕೆಲಸ ಮಾಡುತ್ತಿದ್ದು, ಬಡವರು, ನಿರ್ಗತಿಕರ ಹಸಿವು ನೀಗಿಸುವ ಕೆಲಸ ಮಾಡಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ