ಕ್ರೇಜಿ ಕ್ವೀನ್ ರಕ್ಷಿತಾರವರು ಮತ್ತೆ ನಟಿಸುವುದಾದರೆ ಅದು ಈ ನಟನ ಜೊತೆಯಂತೆ

ಭಾನುವಾರ, 15 ಏಪ್ರಿಲ್ 2018 (12:12 IST)
ಬೆಂಗಳೂರು : ನಟನಾ ಲೋಕದಿಂದ ದೂರ ಉಳಿದ ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾ ಅವರು ಇದೀಗ ತಮ್ಮ ನೆಚ್ಚಿನ ನಟರೊಬ್ಬರ ಜೊತೆ ನಟಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಹೌದು. ಪುನೀತ್ ರಾಜ್ ಕುಮಾರ್ ಅವರು ಅಭಿನಯಿಸಿದ ‘ಅಪ್ಪು’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾ ಅವರು ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಆನಂತರ  `ಕಲಾಸಿಪಾಳ್ಯ’, `ಅಯ್ಯ’, `ಮಂಡ್ಯ’ ಮತ್ತು `ಸುಂಟರಗಾಳಿ’ ಸಿನಿಮಾದಲ್ಲಿ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆ  ಜೋಡಿಯಾಗಿ ನಟಿಸಿದ್ದ ರಕ್ಷಿತಾ ಅವರ ಈ ನಾಲ್ಕು ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು.

 

ಆದರೆ ಇತ್ತೀಚೆಗೆ ನಟನಾ ಲೋಕದಿಂದ ದೂರ ಉಳಿದ ರಕ್ಷಿತಾ ಅವರು ಮತ್ತೆ ನಟಿಸುವುದಾದರೆ ಅದು ದರ್ಶನ್ ಅವರ ಜೊತೆ ಎಂದು ಖಾಸಗಿ ವಾಹಿನಿಯಲ್ಲಿ ನಟ ಶಿವರಾಜ್ ಕುಮಾರ್ ನಡೆಸಿಕೊಡುವ `ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ