ಆಚಾರ್ಯ ಶೂಟಿಂಗ್ ಸೆಟ್ ನಲ್ಲಿ ಮತ್ತೊಮ್ಮೆ ಮದುವೆಯಾದ ನಟಿ ಕಾಜಲ್

ಬುಧವಾರ, 16 ಡಿಸೆಂಬರ್ 2020 (10:18 IST)
ಹೈದರಾಬಾದ್ : ನಟಿ ಕಾಜಲ್ ಅಗರ್ವಾಲ್ ಇತ್ತೀಚೆಗಷ್ಟೇ ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾದರು. ಬಳಿಕ  ಮಾಲ್ಡೀವ್ಸ್ ನಲ್ಲಿ ಹನಿಮೂನ್ ಮುಗಿಸಿ ಇದೀಗ ಮತ್ತೆ ಆಚಾರ್ಯ ಶೂಟಿಂಗ್ ಗೆ ಸೇರಿಕೊಂಡಿದ್ದಾರೆ.

ಆ ವೇಳೆ ಕಾಜಲ್ ಪತಿ ಗೌತಮ್ ಆಚಾರ್ಯ ಶೂಟಿಂಗ್ ಸೆಟ್ ಗೆ ಭೇಟಿ ನೀಡಿ ಚಿತ್ರ ತಂಡಕ್ಕೆ ಅಚ್ಚರಿ ಮೂಡಿಸಿದ್ದಾರೆ. ಅಲ್ಲಿ ಕಾಜಲ್ ಮತ್ತು ಗೌತಮ್ ಅವರನ್ನು ಅಭಿನಂದಿಸಿದ ಚಿತ್ರತಂಡ ನವದಂಪತಿಗಳ ಕೈಯಲ್ಲಿ ಹೂವಿನ ಹಾರವನ್ನು ಬದಲಾಯಿಸುವುದರ ಮೂಲಕ ಮತ್ತೊಮ್ಮೆ ಮದುವೆ ಮಾಡಿಸಿದ್ದಾರೆ. ದಂಪತಿಗಳಿಗೆ ಮೆಗಾಸ್ಟಾರ್ ಚಿರಂಜೀವಿ ಅವರು ಆಶೀರ್ವಾದ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ