ಪುನೀತ್ ರಾಜಕುಮಾರ್ ಬ್ಯಾನರ್ ನ ಹೊಸ ಸಿನಿಮಾ: ಡ್ಯಾನಿಶ್ ಸೇಠ್ ನಾಯಕ

ಶನಿವಾರ, 2 ಜನವರಿ 2021 (09:19 IST)
ಬೆಂಗಳೂರು: ಪುನೀತ್ ರಾಜಕುಮಾರ್ ತಮ್ಮ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಹೊಸ ಸಿನಿಮಾ ನಿರ್ಮಾಣ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. 


ಈ ಸಿನಿಮಾಗೆ ಡ್ಯಾನಿಶ್ ಸೇಠ್ ನಾಯಕರಾಗಿದ್ದಾರೆ. ಈ ಹಿಂದೆ ಪಿಆರ್ ಕೆ ಬ್ಯಾನರ್ ನಲ್ಲಿ ಡ್ಯಾನಿಶ್ ‘ಫ್ರೆಂಚ್ ಬಿರಿಯಾನಿ’ ಸಿನಿಮಾಗೆ ನಾಯಕರಾಗಿದ್ದರು. ಇದೀಗ ಹೊಸ ಸಿನಿಮಾದ ಟೈಟಲ್ ‘ಒನ್ ಕಟ್ ಟೂ ಕಟ್’. ಕೆಲವು ವರ್ಷಗಳ ಮೊದಲು ಸರ್ಕಾರಿ ಶಾಲೆಗಳಿಗೆ ಬಣ್ಣ ಬಣ್ಣದ ಪೇಪರ್ ಕಟ್ ಮಾಡಿ ವಿನ್ಯಾಸ ಮಾಡುವುದು ಹೇಗೆಂದು ಪ್ರಾತ್ಯಕ್ಷಿಕೆ ಕೊಡಲು ಬರುತ್ತಿದ್ದರು. ಅಂತಹ ವ್ಯಕ್ತಿಯ ಅವತಾರದಲ್ಲಿ ಡ್ಯಾನಿಶ್ ಕಾಣಿಸಿಕೊಂಡಿದ್ದಾರೆ. ಇದರ ಫಸ್ಟ್ ಲುಕ್ ಕೂಡಾ ಬಿಡುಗಡೆಯಾಗಿದೆ. ಫೆಬ್ರವರಿಯಿಂದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ