ಹೊಸ ವರ್ಷದ ದಿನ ಪ್ರತಿವರ್ಷದ ಸಂಪ್ರದಾಯ ಬಿಡದ ಜಗ್ಗೇಶ್

ಶುಕ್ರವಾರ, 1 ಜನವರಿ 2021 (10:04 IST)
ಬೆಂಗಳೂರು: ಹೊಸ ವರ್ಷದ ಈ ದಿನವನ್ನು ನವರಸನಾಯಕ ಜಗ್ಗೇಶ್ ಪ್ರತಿವರ್ಷವೂ ತಮ್ಮಿಷ್ಟದ ಒಂದು ಜಾಗದಲ್ಲಿ ಕಳೆಯುತ್ತಾರೆ. ಅದು ಬೇರೆಲ್ಲೂ ಅಲ್ಲ, ತಮ್ಮ ಮೆಚ್ಚಿನ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ.


ಪ್ರತೀ ವರ್ಷವೂ ಈ ಪದ್ಧತಿಯನ್ನು ಜಗ್ಗೇಶ್ ತಪ್ಪಿಸಲ್ಲವಂತೆ. ಈ ಬಾರಿಯೂ ಅದನ್ನು ಮುಂದುವರಿಸಿದ್ದಾರೆ. ಹೊಸ ವರ್ಷದ ಮೊದಲ ದಿನ ರಾಯರ ಮಠಕ್ಕೆ ತಮ್ಮ ಆಪ್ತರ ಜೊತೆಗೆ ಜಗ್ಗೇಶ್ ತೆರಳಿದ್ದಾರೆ. ಇದಕ್ಕೂ ಮೊದಲು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದು, ಹೊಸ ವರ್ಷ ನಿಮ್ಮ ಬಾಳು ಹಸನಾಗಲಿ ಎಂದು ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ