ಪತ್ನಿ ಮಿಲನಾಗೆ ಯಾವತ್ತೂ ರಿಟೇಕ್ ತಗೊಂಡಿಲ್ವಂತೆ ಡಾರ್ಲಿಂಗ್ ಕೃಷ್ಣ

ಮಂಗಳವಾರ, 21 ಸೆಪ್ಟಂಬರ್ 2021 (09:43 IST)
ಬೆಂಗಳೂರು: ಲವ್ ಮಾಕ್ಟೇಲ್ ಸಿನಿಮಾದ ಅಭಿನಯಕ್ಕಾಗಿ ಸೈಮಾ ಅವಾರ್ಡ್ ಸಮಾರಂಭದಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆದ ನಟಿ ಮಿಲನಾ ನಾಗರಾಜ್ ಬಗ್ಗೆ ಪತಿ, ನಿರ್ದೇಶಕ, ನಟ ಡಾರ್ಲಿಂಗ್ ಕೃಷ್ಣ ಹೇಳಿಕೊಂಡಿದ್ದಾರೆ.


ಲವ್ ಮಾಕ್ಟೇಲ್ ಸಿನಿಮಾಗೆ ಈ ಪ್ರಶಸ್ತಿ ಮಿಲನಾಗೆ ಅರ್ಹವಾಗಿ ಸಂದಿದೆ. ಈ ಸಿನಿಮಾದಲ್ಲಿ ಆಕೆ ಎಷ್ಟು ಕ್ಯೂಟ್ ಆಗಿ ಅಭಿನಯಿಸಿದ್ದಾರೆಂದರೆ ನಾನು ಒಂದೇ ಒಂದು ರಿಟೇಕ್ ಬೇಕು ಎಂದು ಕೇಳಿಲ್ಲ. ಈ ಸಿನಿಮಾಗೆ ಆಕೆ ಅಷ್ಟು ಹಾರ್ಡ್ ವರ್ಕ್ ಮಾಡಿದ್ದಾಳೆ. ಅದಕ್ಕೆ ತಕ್ಕ ಗೌರವ ಸಿಕ್ಕಿದೆ ಎಂದು ಡಾರ್ಲಿಂಗ್ ಕೃಷ್ಣ ಪತ್ನಿಯನ್ನು ಹೊಗಳಿದ್ದಾರೆ.

ಇನ್ನು, ಮಿಲನಾ ಕೂಡಾ ಈ ಸಿನಿಮಾದಲ್ಲಿ ಅಭಿನಯಿಸುವಾಗ ಡಾರ್ಲಿಂಗ್ ಕೃಷ್ಣ ಬೆಂಬಲದ ಬಗ್ಗೆ ಹೊಗಳಿ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ