ಸದ್ಯದಲ್ಲೇ ಹೊಸ ಸುದ್ದಿ ಕೊಡಲಿದ್ದಾರೆ ಡಾರ್ಲಿಂಗ್ ಕೃಷ್ಣ

ಶುಕ್ರವಾರ, 27 ಆಗಸ್ಟ್ 2021 (09:26 IST)
ಬೆಂಗಳೂರು: ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿ ನಟರಲ್ಲಿ ಡಾರ್ಲಿಂಗ್ ಕೃಷ್ಣ ಕೂಡಾ ಒಬ್ಬರು. ಡಾರ್ಲಿಂಗ್ ಕೃಷ್ಣ ಸದ್ಯದಲ್ಲೇ ಹೊಸ ಸುದ್ದಿಯೊಂದನ್ನು ಕೊಡಲಿದ್ದಾರೆ.


ಈಗಾಗಲೇ ಲವ್ ಮಾಕ್ಟೇಲ್ 2 ಮುಗಿಸಿರುವ ಡಾರ್ಲಿಂಗ್ ಕೃಷ್ಣ ಕೈಯಲ್ಲಿ ಹಲವು ಚಿತ್ರಗಳಿವೆ. ಅದರ ಜೊತೆಗೆ ಅವರ ಕಡೆಯಿಂದ ಸದ್ಯದಲ್ಲೇ ಹೊಸ ಸಿನಿಮಾವೊಂದರ ಘೋಷಣೆ ಹೊರಬೀಳಲಿದೆ.

‘ಕಾಲಚಕ್ರ’ ಖ್ಯಾತಿಯ ಸುಮಂತ್ ಕ್ರಾಂತಿ ನಿರ್ಮಾಪಕರಾಗಿ ‘ಮಳೆ’ ಸಿನಿಮಾ ಖ್ಯಾತಿಯ ಶಿವತೇಜಸ್ ನಿರ್ದೇಶಕರಾಗಿರುವ ಹೊಸ ಸಿನಿಮಾವೊಂದು ಸದ್ಯದಲ್ಲೇ ಘೋಷಣೆಯಾಗಲಿದೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆದಿದೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ