ದರ್ಶನ್ ಅರೆಸ್ಟ್: ಪವಿತ್ರಾ ಗೌಡ ಹಳೇ ಸ್ಟೋರಿ ಬಿಚ್ಚಿಟ್ಟ ಹಳೇ ಗಂಡ ಸಂಜಯ್

sampriya

ಗುರುವಾರ, 13 ಜೂನ್ 2024 (17:02 IST)
Photo By X
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ 1 ಆರೋಪಿಯಾಗಿ ಪೊಲೀಸ್‌ ಕಸ್ಟಡಿಯಲ್ಲಿರುವ ಪವಿತ್ರಾ ಗೌಡ ಪರ ಆಕೆಯ ಮಾಜಿ ಗಂಡ ಸಂಜಯ್‌ ಸಿಂಗ್‌ ಅವರು ಬ್ಯಾಟಿಂಗ್‌ ಮಾಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂಜಯ್‌ ಸಿಂಗ್‌ ಅವರು, ಈ ಪ್ರಕರಣದಲ್ಲಿ ಪವಿತ್ರಾ ಅವರದ್ದು ಯಾವುದೇ ತಪ್ಪಿಲ್ಲ. ಆಕೆ ಕೊಲೆ ಮಾಡಿಸುವ ಮನಸ್ಥಿತಿಯವಳಲ್ಲ. ನಾನು ಆಕೆಯ ಜತೆ 5 ವರ್ಷದ ಸಂಸಾರ ಮಾಡಿದ್ದು, ಯಾವತ್ತೂ ಸಿಟ್ಟಿನಲ್ಲಿ ಎದುರು ಮಾತನಾಡಿದವಳಲ್ಲ. ನಾನೇ ಜೋರಾಗಿ ಮಾತನಾಡಿದ್ರು, ನನಗೆ ಸಮಾಧಾನ ಮಾಡುತ್ತಿದ್ದಳು. ಅಂತವಳು ಯಾವತ್ತು ಈ ರೀತಿಯ ಕೃತ್ಯ ಮಾಡಲು ಸಾಧ್ಯವಿಲ್ಲ ಎಂದರು.

ಇನ್ನೂ ಈ ಪ್ರಕರಣದಲ್ಲಿ ದರ್ಶನ ಅವರದ್ದು ತಪ್ಪಿಲ್ಲ. ಇದರಲ್ಲಿ ತಪ್ಪಿರುವುದು ಹತ್ಯೆಯಾದ ರೇಣುಕಾಸ್ವಾಮಿ ಅವರದ್ದು. ಅವರನ್ನೇ ಈ ಪ್ರಕರಣದಲ್ಲಿ ಎ 1 ಆರೋಪಿಯನ್ನಾಗಿ ಮಾಡಬೇಕಿತ್ತು. ಒಂದು ಹೆಣ್ಣಿಗೆ ಪದೇ ಪದೇ ಅಶ್ಲೀಲವಾಗಿ ಮೆಸೇಜ್‌ ಕಳುಹಿಸಿದಾಗ ಆಕೆ ನೊಂದು ತನ್ನ ಗಂಡನ ಬಳಿ ಹೇಳುವುದ ಸಹಜ. ಅದರಂತೆ ಪವಿತ್ರಾ ಗೌಡ ಅದನ್ನು ದರ್ಶನ್‌ ಬಳಿ ಹೇಳಿಕೊಂಡಿದ್ದಾರೆ. ಇದರಲ್ಲಿ ಪವಿತ್ರಾದ್ದಾಗಲಿ, ದರ್ಶನ್‌ ಅವರದ್ದಾಗಲಿ ಯಾವುದೇ ತಪ್ಪಿಲ್ಲ ಎಂದು ಪ್ರತಿಕ್ರಿಯಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ