ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ ಎಂದ ಅಶ್ವಿನಿ ಗೌಡ: ಕರ್ನಾಟಕ ರತ್ನ ಬಿಡಮ್ಮಾ ಎಂದ ನೆಟ್ಟಿಗರು

Krishnaveni K

ಬುಧವಾರ, 22 ಅಕ್ಟೋಬರ್ 2025 (10:14 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ಅಶ್ವಿನಿ ಗೌಡ ಭಾರೀ ಸದ್ದು ಮಾಡುತ್ತಿದ್ದಾರೆ. ನಿನ್ನೆಯ ಎಪಿಸೋಡ್ ನಲ್ಲಿ ಕನ್ನಡ ಅಂತ ಬಂದ್ರೆ ನನ್ನ ಶೇಕ್ ಮಾಡಕ್ಕಾಗಲ್ಲ

ಮನೆಗೆ ಹೊಸದಾಗಿ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಮೂವರ ಬಗ್ಗೆ ಮನೆಯವರು ಅಭಿಪ್ರಾಯ ಹೇಳಬೇಕಿತ್ತು. ಈ ವೇಳೆ ರಘು ಬಗ್ಗೆ ಅಶ್ವಿನಿ ಗೌಡ ಖಡಕ್ ಆಗಿ ಮಾತನಾಡಿದ್ದಾರೆ. ‘ಕೇವಲ ಮೂರು ವಾರಗಳ ದೃಶ್ಯಾವಳಿಗಳಿಂದ ನೀವು ಜಡ್ಜ್ ಮಾಡ್ತೀರಾ ಎಂದರೆ ಅದು ಎಷ್ಟು ಸರಿ ಎಂಬುದು ನನ್ನ ಪ್ರಶ್ನೆ.ಆದರೂ ನನ್ನ ಹಿನ್ನಲೆಯನ್ನು, ನನ್ನ ಪರ್ಸನಲ್ ಟಾರ್ಗೆಟ್ ನ್ನು ನೀವು ಮಾಡ್ತೀರಾ. ಕನ್ನಡ ಅಂತ ಬಂದಾಗ ಅದು ಎಂಥಹವರೇ ಆಗಿರಲಿ, ಅವರು 100 ಕೆ.ಜಿ ಇರಲಿ, 200 ಕೆ.ಜಿ ಇರಲಿ, ಏನೇ ಆಗಿರಲಿ ನನ್ನ ಶೇಕ್ ಮಾಡಕ್ಕಾಗಲ್ಲ. ನನಗೆ ನನ್ನ ಭಾಷೆ ಮುಖ್ಯ. ಈವತ್ತು ನಾನು ಬಿಗ್ ಬಾಸ್ ಮನೆಯಲ್ಲಿ ನಿಂತಿದ್ದೀನಿ ಎಂದರೆ ಅಶ್ವಿನಿ ಗೌಡ ಕನ್ನಡಕ್ಕಾಗಿ  ಹೋರಾಟ ಮಾಡಿಕೊಂಡಿದ್ದಕ್ಕೆ ಇಲ್ಲಿಗೆ ಬಂದು ತಲುಪಿರೋದು’ ಎಂದು ತಿರುಗೇಟು ನೀಡಿದ್ದಾರೆ.

ಇದಕ್ಕೆ ಮೊದಲು ಮನೆಗೆ ಬಂದ ಮೊದಲ ದಿನವೇ ರಘು ಮತ್ತು ಅಶ್ವಿನಿ ಗೌಡ ನಡುವೆ ಕಿರಿಕ್ ನಡೆಯುತ್ತದೆ. ಅಶ್ವಿನಿ ಗೌಡಗೆ ಏಕವಚನದಲ್ಲಿ ರಘು ಮಾತನಾಡುತ್ತಾರೆ. ಇದೇ ವಿಚಾರವಾಗಿ ಅಶ್ವಿನಿ ಈಗ ಈ ರೀತಿ ತಿರುಗೇಟು ನೀಡಿದ್ದರು.

ಇನ್ನು, ಅಶ್ವಿನಿ ಗೌಡ ಮೊನ್ನೆಯಿಂದ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಇದ್ದಾರೆ. ಇದೀಗ ಕನ್ನಡದ ಬಗ್ಗೆ ಮಾತನಾಡಿದ್ದಕ್ಕೆ ಮತ್ತೆ ಟ್ರೋಲ್ ಆಗಿದ್ದಾರೆ. ಆಯ್ತು ಬಿಡಮ್ಮಾ ನಿಮ್ಮ ಕನ್ನಡ ಕಳಕಳಿಗೆ ಕರ್ನಾಟಕ ರತ್ನವೇ ಕೊಡಬೇಕು ಎಂದು ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ