ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಇದೊಂದು ಕಾರಣಕ್ಕೆ ಮಾನಿಟರ್ ಮುಂದಿರುತ್ತಾರಂತೆ ಪ್ರಗತಿ

Krishnaveni K

ಬುಧವಾರ, 22 ಅಕ್ಟೋಬರ್ 2025 (10:48 IST)

ಬೆಂಗಳೂರು: ರಿಷಬ್ ಶೆಟ್ಟಿ ರೊಮ್ಯಾನ್ಸ್ ಸೀನ್ ಮಾಡುವಾಗ ಹೆಚ್ಚಾಗಿ ಇದೊಂದು ಕಾರಣಕ್ಕೆ ಪ್ರಗತಿ ಶೆಟ್ಟಿ ಮಾನಿಟರ್ ಮುಂದೆ ಕೂತಿರುತ್ತಾರಂತೆ. ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಾರೆ.

ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ರಿಷಬ್ ಮತ್ತು ರುಕ್ಮಿಣಿ ವಸಂತ್ ರೊಮ್ಯಾಂಟಿಕ್ ಸೀನ್ ನಡೆಯುವಾಗ ಪ್ರಗತಿ ಅಲ್ಲಿಯೇ ಇದ್ದರು. ಅವರು ಇನ್ನಷ್ಟು ರೊಮ್ಯಾನ್ಸ್ ಮಾಡಿಸಿ ಎಂದು ಡ್ಯಾನ್ಸ್ ಮಾಸ್ಟರ್ ಭೂಷಣ್ ಗೆ ಹೇಳಿದ್ದರು ಎಂದು ಸುದ್ದಿಯಾಗಿತ್ತು.

ಈ ಬಗ್ಗೆ ಪ್ರಗತಿ ಬಳಿ ಸಂದರ್ಶಕರು ಕೇಳಿದ್ದಾರೆ. ರಿಷಬ್ ರೊಮ್ಯಾನ್ಸ್ ಸೀನ್ ಮಾಡುವಾಗ ನೀವು ಎದುರೇ ಇದ್ದರಂತೆ ಎಂದು ಕೇಳಿದ್ದಾರೆ. ಇದಕ್ಕೆ ಪ್ರಗತಿ ಕೂಡಾ ನಗುತ್ತಲೇ ತಮಾಷೆಯಾಗಿ ಉತ್ತರಿಸಿದ್ದಾರೆ. ನಾನು ಮತ್ತು ಅರವಿಂದ್ ಕಶ್ಯಪ್ (ಕ್ಯಾಮರಾ ಮ್ಯಾನ್) ಹೆಚ್ಚಾಗಿ ರೊಮ್ಯಾಂಟಿಕ್ ಸೀನ್ ನಡೆಯುವಾಗ ಮಾನಿಟರ್ ಮುಂದೆಯೇ ಕೂತಿರ್ತೀವಿ.

ರಿಷಬ್ ರೊಮ್ಯಾಂಟಿಕ್ ಸೀನ್ ಮಾಡಲು ಯಾವತ್ತೂ ಸ್ವಲ್ಪ ನಾಚಿಕೆಪಡುತ್ತಾರೆ. ಹೀಗಾಗಿ ಅವರು ಇನ್ನಷ್ಟು ಚೆನ್ನಾಗಿ ಮಾಡಿ ಎಂದು ಮಾನಿಟರ್ ಮುಂದೆಯೇ ಕೂತು ನಾನು ಅರವಿಂದ್ ಕಶ್ಯಪ್ ಅವರನ್ನು ರೇಗಿಸುತ್ತಲೇ ಇರುತ್ತೇವೆ ಎಂದಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ನಾನು ಹೀಗೇ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ