ಮೈಸೂರಿನ ಫಾರ್ಮ್‌ಹೌಸ್‌ಗೆ ಪತ್ನಿ, ತಾಯಿ ಜತೆ ಆಗಮಿಸಿದ ದರ್ಶನ್‌

Sampriya

ಶುಕ್ರವಾರ, 20 ಡಿಸೆಂಬರ್ 2024 (19:34 IST)
ಮೈಸೂರು: ಬುಧವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಟ ದರ್ಶನ್ ತೂಗುದೀಪ ಅವರು ಜಿಲ್ಲೆಯ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಇನ್ನೂ ದರ್ಶನ್ ಜತೆಗೆ ಪತ್ನಿ ವಿಜಯಲಕ್ಷ್ಮಿ, ತಾಯಿ ಮೀನಾ ತೂಗುದೀಪ, ನಟ ಧನ್ವೀರ್ ಕೂಡಾ ಇದ್ದಾರೆ. ಗೇಟನ್ನು ಟಾರ್ಪಲ್‌ನಿಂದ ಮುಚ್ಚಲಾಗಿದೆ.

ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿಯಾದ ಅವರು ಜಾಮೀನಿನ ಮೇಲೆ ಕಾರಾಗೃಹದಿಂದ ಹೊರಬಂದಿದ್ದಾರೆ.

ನಟ ದರ್ಶನ್‌ಗೆ ಬೆಂಗಳೂರಿನ ಸಿಸಿಎಚ್‌ 57ನೇ ಸೆಷನ್ಸ್‌ ನ್ಯಾಯಾಲಯವು ಶುಕ್ರವಾದರಿಂದ ಮುಂದಿನ ವರ್ಷದ ಜ.5ರ ವರೆಗೆ ಮೈಸೂರಿಗೆ ತೆರಳಲು ಅವಕಾಶ ನೀಡಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ