ಕಾಟೇರ ಸಿನಿಮಾಗೆ ರೂಲ್ಸ್ ಬ್ರೇಕ್ ಮಾಡಿದರಾ ದರ್ಶನ್? ಅವರು ಹೇಳಿದ್ದೇನು?

ಮಂಗಳವಾರ, 12 ಸೆಪ್ಟಂಬರ್ 2023 (08:48 IST)
Photo Courtesy: Twitter
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ಕಾಟೇರ ಸಿನಿಮಾ ತಂಡ ಮಾಧ‍್ಯಮಗೋಷ್ಠಿ ನಡೆಸಿದ್ದು, ಚಿತ್ರದ ಬಗ್ಗೆ ಮಾಹಿತಿ ನೀಡಿದೆ.

ರಾಕ್ ಲೈನ್ ವೆಂಕಟೇಶ್ ನಿರ್ಮಿಸಿರುವ ತರುಣ್ ಸುಧೀರ್ ನಾಯಕರಾಗಿರುವ ಕಾಟೇರ ಸಿನಿಮಾಗಾಗಿ ದರ್ಶನ್ ತಮ್ಮ ಎಂದಿನ ಪದ್ಧತಿ ಮುರಿದು 100 ದಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಸುದ್ದಿಯಿತ್ತು. ಈ ಬಗ್ಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ಸಾಮಾನ್ಯವಾಗಿ ದರ್ಶನ್ ಯಾವುದೇ ಸಿನಿಮಾವಿರಲಿ 85 ದಿನಕ್ಕಿಂತ ಹೆಚ್ಚು ಕಾಲ್ ಶೀಟ್ ಕೊಡಲ್ಲ. ಈ ಸಿನಿಮಾಗೂ ಆ ನಿಯಮ ಮುರಿದಿಲ್ಲ ಎಂದಿದ್ದಾರೆ.

ಸಿನಿಮಾ ಚಿತ್ರೀಕರಣ 100 ದಿನವಾಗಿರುವುದು ನಿಜ. ಆದರೆ ನಾನು ಇದುವರೆಗೆ 71 ದಿನ ಮಾತ್ರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೇನೆ. ಇನ್ನು ಹಾಡುಗಳು ಸೇರಿದಂತೆ ಉಳಿದ ಚಿತ್ರೀಕರಣಕ್ಕೆ 85 ದಿನ ಕರೆಕ್ಟ್ ಆಗಿ ಮುಗಿಸಬಹುದು ಎಂದಿದ್ದಾರೆ ದರ್ಶನ್. ಕಾಟೇರ ಸಿನಿಮಾದಲ್ಲಿ ನಟಿ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾ. ಆಕೆಯ ಬಗ್ಗೆಯೂ ದರ್ಶನ್ ಹೊಗಳಿ ಮಾತನಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ