ನಟ ದರ್ಶನ್ ಗೆ ರಾಜಕೀಯ, ಸಿನಿಮಾ ರಂಗದಲ್ಲಿ ಪ್ರಭಾವಿಗಳ ಸ್ನೇಹ ಸಂಬಂಧವಿದೆ. ಇವರನ್ನು ಬಳಸಿಕೊಂಡು ದರ್ಶನ್ ತಮ್ಮ ವಿರುದ್ಧ ಬಂದಿರುವ ಆರೋಪದಿಂದ ಬಚಾವ್ ಆಗಲು ಸಾಕಷ್ಟು ಪ್ರಯತ್ನ ನಡೆಸಿದ್ದರಂತೆ. ಇದಕ್ಕಾಗಿ ತಮ್ಮ ಆಪ್ತರ ಮೂಲಕ ಎಸ್ ಪಿಪಿ ಬದಲಾವಣೆಗೆ ಪ್ರಯತ್ನ ನಡೆಸಿದ್ದರು ಎನ್ನಲಾಗಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸರ್ಕಾರೀ ಅಭಿಯೋಜಕರಾಗಿ ಖ್ಯಾತ ವಕೀಲ ಪ್ರಸನ್ನಕುಮಾರ್ ಅವರನ್ನು ನೇಮಿಸಲಾಗಿದೆ. ಪ್ರಸನ್ನಕುಮಾರ್ ಅತ್ಯಂತ ನಿಪುಣ ವಕೀಲರಾಗಿದ್ದು, ಅವರು ವಾದ ಮಾಡಿದರೆ ತಮಗೆ ಹಿನ್ನಡೆಯಾಗಬಹುದು ಎಂದು ದರ್ಶನ್ ಲೆಕ್ಕಾಚಾರ ಹಾಕಿದ್ದರು.