ರಂಜಾನ್ ಹಬ್ಬದ ಶುಭಾಶಯ ಕೋರಿದ ನಟ ದರ್ಶನ್

ಶನಿವಾರ, 16 ಜೂನ್ 2018 (14:56 IST)
ಬೆಂಗಳೂರು : ದೇಶದಲ್ಲೆಡೆ ಇಂದು ಎಲ್ಲಾ ಮುಸ್ಲಿಂ ಬಾಂಧವರು ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ಹಿನ್ನಲೆಯಲ್ಲಿ ಇದೀಗ ನಟ ದರ್ಶನ್ ಅವರು ಹಾಗೂ ಅವರ ಸಹೋದರ ದಿನಕರ್ ಅವರು ರಂಜಾನ್ ಹಬ್ಬದ ಶುಭಾಶೇಯ ಕೋರಿದ್ದಾರೆ.

ನಟ ದರ್ಶನ್ ಅವರು ಟ್ವಿಟ್ಟರ್ ನಲ್ಲಿ ತಾವು ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಫೋಟೋವನ್ನ ಪೋಸ್ಟ್  ಮಾಡಿ ‘ಅಲ್ಲಾ ನಿಮ್ಮನ್ನು ಪ್ರಾಮಾಣಿಕತೆ ಮತ್ತು ಸಮೃದ್ಧಿಯ ಮಾರ್ಗದ ಕಡೆಗೆ ಕರೆದೊಯ್ಯುಲಿ ಮತ್ತು ಸಂತೋಷದಿಂದ ನಿಮ್ಮನ್ನು ಆಶೀರ್ವದಿಸಲಿ. ಈದ್ ಮುಬಾರಕ್’  ಎಂದು ಟ್ವೀಟ್ ಮಾಡಿದ್ದಾರೆ.

 

ಹಾಗೇ ದರ್ಶನ್ ಜೊತೆಗೆ ದರ್ಶನ್ ಸಹೋದರ ದಿನಕರ್ ತೂಗುದೀಪ ಅವರು ಕೂಡ ರಂಜಾನ್ ಹಬ್ಬಕ್ಕೆ ಶುಭ ಕೋರಿದ್ದಾರೆ. ‘ಈ ದಿನದ ಪ್ರತಿ ಕ್ಷಣಗಳು ನಿಮಗೆ ಸಂತೋಷ ಸಿಗಲಿ. ವರ್ಷವಿಡಿ ನಿಮ್ಮ ಮನೆ ಮತ್ತು ಕುಟುಂಬ ಮತ್ತು ವಿಶೇಷವಾಗಿ ಎಲ್ಲರಿಗೂ ಒಳ್ಳೆಯದಾಗಲಿ. ಈದ್ ಮುಬಾರಕ್’ ಎಂದು ಟ್ವೀಟ್ ಮಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ