ಇದನ್ನು ಓದಿ ಆಲೂಗಡ್ಡೆ ಬಗೆಗಿನ ಈ ತಪ್ಪು ಕಲ್ಪನೆಯನ್ನು ಮನಸ್ಸಿನಿಂದ ತೆಗೆದುಹಾಕಿ

ಶನಿವಾರ, 16 ಜೂನ್ 2018 (08:37 IST)
ಬೆಂಗಳೂರು : ಆಲೂಗಡ್ಡೆ ತಿಂದರೆ ದಪ್ಪವಾಗುತ್ತಾರೆ, ಗ್ಯಾಸ್ಟ್ರಿಕ್ ಆಗುತ್ತದೆ ಎಂಬ ಕಾರಣಕ್ಕಾಗಿ ಆಲೂಗಡ್ಡೆಯಲ್ಲಿ ಅಧಿಕ ಪೋಷಕಾಂಶಗಳು ಇರುವುದು ತಿಳಿದರೂ ಕೂಡ ಕೆಲವರು ಅದನ್ನು ತಿನ್ನಲು ಭಯಪಡುತ್ತಾರೆ. ಆದ್ದರಿಂದ ಈ ಭಯವನ್ನು ದೂರಮಾಡಿ ಮೊದಲು ಆಲೂಗಡ್ಡೆಯ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳಿ.


ಆಲೂಗಡ್ಡೆ ಉತ್ತಮ ಪೌಷ್ಠಿಕಾಂಶದ ಆಹಾರ. ಇದರಲ್ಲಿರುವ ಕಾರ್ಬೋಹೈಡ್ರೇಟ್‌ ದೇಹದಲ್ಲಿ ಸಕ್ಕರೆಯಂಶ ಇದ್ದಕ್ಕಿದ್ದಂತೆ ಹೆಚ್ಚಾಗುವುದನ್ನು ತಡೆಯಲು ಸಹಕರಿಸುತ್ತದೆ. ಆದ್ದರಿಂದ ಆಲೂಗಡ್ಡೆಯನ್ನು ತಿನ್ನದಿದ್ದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಇನ್ನು ಆಲೂಗಡ್ಡೆಯ ಸಿಪ್ಪೆ ತೆಗೆದು ಅಡುಗೆ ಮಾಡುವ ಬದಲು ಚೆನ್ನಾಗಿ ತೊಳೆದು ಸಿಪ್ಪೆ ಸಹಿತವಾಗಿ ಅಡುಗೆ ಮಾಡಿ. ಯಾಕೆಂದರೆ ಸಿಪ್ಪೆಯಲ್ಲಿರುವ ನಾರಿನಂಶ ದೇಹಕ್ಕೆ ತುಂಬಾ ಒಳ್ಳೆಯದು. ಹಾಗೇ ಆಲೂಗಡ್ಡೆಯನ್ನು ತಿಂದರೆ ದಪ್ಪಗಾಗುತ್ತಾರೆ ಎನ್ನುವ ತಪ್ಪು ಕಲ್ಪನೆಯಿದೆ. ಆದರೆ ಆಲೂಗಡ್ಡೆಯನ್ನು ಫ್ರೈ ಮಾಡಿ ತಿಂದರೆ ಆರೋಗ್ಯಕರವಲ್ಲ ಹಾಗೂ ಇದು ದೇಹದ ತೂಕವನ್ನು ಹೆಚ್ಚಿಸುತ್ತದೆ, ಆದರೆ ಬೇಯಿಸಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ