ದರ್ಶನ್ ನ್ಯಾಯಾಂಗ ಬಂಧನ ಮತ್ತೆ ಇಷ್ಟು ದಿನ ಮುಂದುವರಿಕೆ: ಇಂದು ಕೋರ್ಟ್ ನಲ್ಲಿ ದರ್ಶನ್ ಹೊಸ ಬೇಡಿ

Krishnaveni K

ಮಂಗಳವಾರ, 17 ಸೆಪ್ಟಂಬರ್ 2024 (14:57 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಇತರೆ ಆರೋಪಿಗಳನ್ನು ನ್ಯಾಯಾಲಯ ಮತ್ತೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇಂದು ಕೋರ್ಟ್ ಕಲಾಪದಲ್ಲಿ ಏನೇನಾಯ್ತು ಎಂಬ ವಿವರ ಇಲ್ಲಿದೆ.

ಮೂರು ದಿನಗಳ ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಹಿನ್ನಲೆಯಲ್ಲಿ ಇಂದು ಮತ್ತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಆರೋಪಿಗಳೂ ಆಯಾ ಜೈಲಿನಿಂದ ನ್ಯಾಯಾಧೀಶರ ಮುಂದೆ ಹಾಜರಾದರು. ಇದೀಗ ನ್ಯಾಯಾಧೀಶರು ಸೆಪ್ಟೆಂಬರ್ 30 ರವರೆಗೂ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಇಂದು ದರ್ಶನ್ ನ್ಯಾಯಾಧೀಶರ ಮುಂದೆ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ. ಜೈಲಿನಲ್ಲಿ ಕುಳಿತುಕೊಳ್ಳಲು ಒಂದು ಪ್ಲಾಸ್ಟಿಕ್ ಚೇರ್ ಕೊಡಿ. ಬೇರೆ ಖೈದಿಗಳಿಗೆ ಚೇರ್ ನೀಡಲಾಗುತ್ತಿದೆ. ಆದರೆ ದರ್ಶನ್ ಗೆ ಕೊಡುತ್ತಿಲ್ಲ. ದರ್ಶನ್ ಅವರನ್ನು ಜೈಲು ಅಧಿಕಾರಿಗಳು ಏನಂದುಕೊಂಡಿದ್ದಾರೋ ಗೊತ್ತಿಲ್ಲ ಎಂದು ದರ್ಶನ್ ಪರ ವಕೀಲರು ನ್ಯಾಯಾಧೀಶರ ಮುಂದೆ ಬೇಡಿಕೆಯಿಟ್ಟಿದ್ದಾರೆ.

ಇದಕ್ಕೆ ನ್ಯಾಯಾಧೀಶರು, ಜೈಲು ನಿಯಮದ ಪ್ರಕಾರ ಏನು ಕೊಡಬಹುದೋ ಅದನ್ನು ಕೊಡಬಹುದು. ಅವುಗಳನ್ನು ಕೊಡಲು ಆದೇಶ ಮಾಡುತ್ತೇನೆ ಎಂದರು. ಇನ್ನು ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ದರ್ಶನ್ ಮತ್ತು ಇತರೆ ಆರೋಪಿಗಳ ವಿರುದ್ಧ ಪೊಲೀಸರು ಸಲ್ಲಿಸಿರುವ ಆರೋಪ ಪಟ್ಟಿಯನ್ನು ಕೋರ್ಟ್ ಮಾನ್ಯ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ