ಪವಿತ್ರಾ ಗೌಡ ಬೆಡ್ ರೂಂನಲ್ಲಿತ್ತು ದರ್ಶನ್ ಒಳ ಉಡುಪುಗಳು

Krishnaveni K

ಶುಕ್ರವಾರ, 13 ಸೆಪ್ಟಂಬರ್ 2024 (13:11 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿರುವ ನಟ ದರ್ಶನ್ ಒಳ ಉಡುಪು, ಕೂದಲು ಮಾದರಿಗಳನ್ನು ಪವಿತ್ರಾ ಗೌಡ ಬೆಡ್ ರೂಂನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪವಿತ್ರಾ ಗೌಡ ಮತ್ತು ದರ್ಶನ್ ನಡುವೆ ಲಿವ್ ಇನ್ ರಿಲೇಷನ್ ಶಿಪ್ ಇತ್ತು ಎನ್ನುವುದನ್ನು ಇಬ್ಬರೂ ಚಾರ್ಜ್ ಶೀಟ್ ನಲ್ಲೇ ಹೇಳಿಕೆ ನೀಡಿದ್ದಾರೆ. ಇವರಿಬ್ಬರ ನಡುವಿನ ಸಂಬಂಧಕ್ಕೆ ಸಾಕ್ಷ್ಯ ಪಡೆಯಲು ಪೊಲೀಸರು ಪವಿತ್ರಾ ಗೌಡ ಮನೆಗೆ ತೆರಳಿ ಅವರಿಗೆ ಸಂಬಂಧಪಟ್ಟ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವೇಳೆ ಆರ್ ಆರ್ ನಗರದ ಪವಿತ್ರಾ ಮನೆಯಲ್ಲಿರುವ ಹಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದರಲ್ಲಿ ಪವಿತ್ರಾ ಬೆಡ್ ರೂಂನಲ್ಲಿ ದರ್ಶನ್ ಒಳ ಉಡಪು, ಕೂದಲು ಮಾದರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ದರ್ಶನ್ ಮತ್ತು ಪವಿತ್ರಾ ನಡುವೆ ಎಂಥಾ ಸಂಬಂಧವಿತ್ತು ಎಂಬುದನ್ನು ಸಾಕ್ಷ್ಯ ವನ್ನು ಪಡೆದುಕೊಂಡಿದ್ದಾರೆ.

ಇನ್ನು, ಪವಿತ್ರಾ ಮನೆಯಲ್ಲಿ ದರ್ಶನ್ ರ ಸಿನಿಮಾಗಳ ನೆನಪಿನ ಕಾಣಿಕೆಗಳನ್ನೂ ಇಡಲಾಗಿದೆ. ಹೀಗಾಗಿ ಇಬ್ಬರ ನಡುವೆ ಎಷ್ಟು ಆತ್ಮೀಯ ಸಂಬಂಧವಿತ್ತು ಎಂಬುದು ಇದರಿಂದ ಖಚಿತವಾಗುತ್ತದೆ. ಇನ್ನು, ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಪವಿತ್ರಾ ಗೌಡ ಇಂದು ಅರ್ಜಿ ಹಿಂಪಡೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ