ಕಲಾಬದುಕಿಗೆ 40 ವರ್ಷ: ಹಳೆಯ ನೆನಪು ಮೆಲುಕು ಹಾಕಿದ ನವರಸನಾಯಕ ಜಗ್ಗೇಶ್

ಮಂಗಳವಾರ, 17 ನವೆಂಬರ್ 2020 (10:33 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ವೃತ್ತಿ ಬದುಕಿಗೆ ಇಂದಿಗೆ 40 ವರ್ಷ ತುಂಬುತ್ತಿದೆ. ಇದು ಅಂತಿಂಥಾ ಸಾಧನೆಯಲ್ಲ. ಇಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡು ಈಗಲೂ ಹಾಸ್ಯಕ್ಕೆ ದೊರೆಯಾಗಿ ಗುರುತಿಸಿಕೊಂಡಿರುವ ಜಗ್ಗೇಶ್ ಈ ಕ್ಷಣದಲ್ಲಿ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.
 


1980 ನವಂಬರ್ 17 ರಂದು ಸಿನಿಮಾ ರಂಗಕ್ಕೆ ನಾ ಬಂದು ಇಂದಿಗೆ 40 ವರ್ಷ. ಈ ಬೆಳವಣಿಗೆಗೆ ಪ್ರೋತ್ಸಾಹಿಸಿದ ನಿರ್ದೇಶಕ, ನಿರ್ಮಾಪಕ ಭುಜತಟ್ಟಿದ ಅಂದಿನ ನನ್ನ ಕಲಾಕುಟುಂಬ, ಮಾಧ್ಯಮ ಕನ್ನಡ ಮನಸ್ಸುಗಳು, ಅಪಮಾನಿಸಿದ ಸ್ನೇಹಕ್ಕೆ, ಗೆಲ್ಲುವೆ ಹೋಗು ಕರಿಯ ಎಂದು ಹರಸಿದ ಅಮ್ಮನಿಗೆ, ಜೊತೆಗೆ ನಿಂತ ಪರಿಮಳ, ಕೋಮಲ್ ರಾಯರ ದಯೆಗೆ ಅಜನ್ಮ ಋಣಿ. ಹರಸಿ ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಇನ್ನು, ಜಗ್ಗೇಶ್ ಅಭಿಮಾನಿಗಳು ಈ ಸಂದರ್ಭದಲ್ಲಿ ವಿಶೇಷ ಸಿಡಿಪಿಯನ್ನೂ ಲಾಂಚ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ