ಡಿ ಬಾಸ್ ಎಂದು ಲೇವಡಿ ಮಾಡಿದ ಸಿಎಂ ಕುಮಾರಸ್ವಾಮಿಗೆ ದರ್ಶನ್ ಕೊಟ್ಟ ತಿರುಗೇಟು ಏನು ಗೊತ್ತಾ?!
ಈ ಬಗ್ಗೆ ಪ್ರತಿಕ್ರಿಯಿಸಿರುವ ದರ್ಶನ್ ‘ಡಿ ಬಾಸ್ ಎನ್ನುವುದು ಅಭಿಮಾನಿಗಳು ನೀಡಿದ ಭಿಕ್ಷೆ. ಬೇರೆ ಯಾರೂ ಅಲ್ಲ’ ಎಂದಿದ್ದಾರೆ. ಅಷ್ಟೇ ಅಲ್ಲ, ನಾನು ಈ ಮೊದಲೇ ಹೇಳಿದಂತೆ ಚುನಾವಣೆ ಸಂದರ್ಭದಲ್ಲಿ ಬರುವ ಇಂತಹ ಟೀಕೆಗಳಿಗೆ ನಾನು ಕೋಪ ಮಾಡಿಕೊಳ್ಳುವುದಿಲ್ಲ. ಯಾರೊಂದಿಗೂ ನೋವು ತೋಡಿಕೊಳ್ಳಲ್ಲ. ಅಭಿಮಾನಿಗಳೂ ಅಷ್ಟೇ ಇಂತಹ ವಿಚಾರಗಳನ್ನು ದೊಡ್ಡದು ಮಾಡಿ ಅವರ ವಿರುದ್ಧ ಫೋಟೋ, ವಿಡಿಯೋ ಹಾಕಬೇಡಿ. ಶಾಂತಿ ಕಾಪಾಡೋಣ ಎಂದು ಮನವಿ ಮಾಡಿದ್ದಾರೆ.