ಕೊರೋನಾ ಕಾಲದಲ್ಲಿ ಪ್ರಾಣಿಗಳಿಗೆ ಮಿಡಿದ ‘ದಾಸ’ ದರ್ಶನ್ ಹೃದಯ
ಭಾನುವಾರ, 6 ಜೂನ್ 2021 (08:52 IST)
ಬೆಂಗಳೂರು: ಕೊರೋನಾ ಕೇವಲ ಮಾನವ ಕುಲಕ್ಕೆ ಮಾತ್ರ ಸಂಕಷ್ಟ ತಂದಿಲ್ಲ. ಬದಲಾಗಿ ಪ್ರಾಣಿಗಳಿಗೂ ಸಂಕಷ್ಟ ತಂದೊಡ್ಡಿದೆ. ಇದರ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜನರಿಗೆ ಮನವಿಯೊಂದನ್ನು ಮಾಡಿದ್ದಾರೆ.
ಕೊರೋನಾ, ಲಾಕ್ ಡೌನ್ ನಿಂದಾಗಿ ಮೃಗಾಲಯಗಳಿಗೆ ಜನ ಬರುತ್ತಿಲ್ಲ. ಇದರಿಂದ ಮೃಗಾಲಯಗಳಿಗೆ ಆದಾಯವಿಲ್ಲದಂತಾಗಿದೆ. ಇದರಿಂದ ಪ್ರಾಣಿಗಳಿಗೆ ಆಹಾರ, ಅಗತ್ಯ ಸೌಕರ್ಯ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಪ್ರಾಣಿಗಳನ್ನು ರಕ್ಷಿಸಲು ಮುಂದಾಗೋಣ ಎಂದು ದರ್ಶನ್ ಕರೆ ನೀಡಿದ್ದಾರೆ.
ಒಂದು ವರ್ಷಕ್ಕೆ ಹುಲಿ ದತ್ತು ತೆಗೆದುಕೊಂಡರೆ 1 ಲಕ್ಷ ರೂ., ಆನೆ ತೆಗೆದುಕೊಂಡರೆ 1 ಲಕ್ಷದ 20 ಸಾವಿರ ರೂ. ಇದನ್ನು ಪ್ರತಿ ತಿಂಗಳು ಕೊಡಬೇಕಾಗಿಲ್ಲ. ಒಂದು ವರ್ಷಕ್ಕೆ ಕೊಟ್ಟರೆ ಸಾಕು. ಅವರ ಬದುಕಿಗೆ ದಾರಿಯಾಗುತ್ತದೆ. ಪ್ರಾಣಿಗಳ ಮೇಲೆ ದಯೆ ತೋರಿ. ದಯಮಾಡಿ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಿ ಎಂದು ದರ್ಶನ್ ವಿಡಿಯೋ ಸಂದೇಶ ಮೂಲಕ ಜನರಿಗೆ ಮನವಿ ಮಾಡಿದ್ದಾರೆ.