ರಸ್ತೆ ಬದಿ ಜಯಮ್ಮ ಮೃತದೇಹ ನೋಡಿ ನೋವಾಯ್ತು: ನಟ ರವಿಶಂಕರ್ ಗೌಡ

ಶನಿವಾರ, 5 ಜೂನ್ 2021 (09:42 IST)
ಬೆಂಗಳೂರು: ಮೊನ್ನೆಯಷ್ಟೇ ಮೃತರಾದ ಹಿರಿಯ ನಟಿ ಬಿ ಜಯಮ್ಮ ಮೃತದೇಹವನ್ನು ರಸ್ತೆ ಬದಿ ಕಸದ ರಾಶಿಯ ಪಕ್ಕದಲ್ಲಿ ಇದ್ದುದನ್ನು ನೋಡಿ ನೋವಾಯ್ತು ಎಂದು ನಟ ರವಿಶಂಕರ್ ಗೌಡ ಹೇಳಿದ್ದಾರೆ.


ಬಿ ಜಯಮ್ಮ ಮೃತದೇಹ ರಸ್ತೆ ಬದಿಯಲ್ಲಿರುವುದನ್ನು ಯಾರೋ ವಿಡಿಯೋ ಮಾಡಿದ್ದು, ನಿನ್ನೆಯಿಡೀ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಅದರ ಜೊತೆಗೆ ಅವರ ಕುಟುಂಬಸ್ಥರೂ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಂಡಿರುವ ನಟ ರವಿಶಂಕರ್ ಗೌಡ, ಜಯಮ್ಮ ಮೃತದೇಹ ಕಸದ ರಾಶಿ ಪಕ್ಕ ಇದ್ದಿದ್ದು ನೋಡಿ ನೋವಾಯ್ತು. ದುನಿಯಾ ವಿಜಿ ಮತ್ತು ನಾವು ಕೂಡಲೇ ಹೋಗಿ ಮಣ್ಣು ಮಾಡಬೇಕು ಎಂದುಕೊಂಡಿದ್ದೆವು. ಆದರೆ ಅಷ್ಟರಲ್ಲಿ ಅವರ ಕಡೆಯವರು ವಿಡಿಯೋ ಮಾಡಿ ಸಂಪ್ರದಾಯವಾಗಿ ಮಣ್ಣು ಮಾಡಿದ್ದೇವೆ
ಎಂದರು. ಹೀಗಾಗಿ ಸಮಾಧಾನವಾಯ್ತು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ