ಸಿದ್ಧರೂಢ ಎಂಬ ವ್ಯಕ್ತಿ 22 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಈಗ ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾಗಿದ್ದಾರೆ. ಜೈಲಿನಲ್ಲಿದ್ದಾಗ ದರ್ಶನ್ ಭೇಟಿಯಾಗಲು ಅವರಿಗೆ ಅವಕಾಶ ಸಿಕ್ಕಿದೆ. ಈ ವೇಳೆ ದರ್ಶನ್ ಜೊತೆ ಕಳೆದ ಕ್ಷಣಗಳ ಬಗ್ಗೆ ಅವರು ಖಾಸಗಿ ವಾಹಿನಿಯಲ್ಲಿ ವಿವರಿಸಿದ್ದಾರೆ.
ಈ ನಡುವೆ ಇಷ್ಟೆಲ್ಲಾ ರಾಮಾಯಣ ನಡೆದರೂ ಪತ್ನಿ ವಿಜಯಲಕ್ಷ್ಮಿ ಮಾತ್ರ ಗಂಡನನ್ನು ಬಿಟ್ಟುಕೊಟ್ಟಿಲ್ಲ. ಗಂಡನಿಗಾಗಿ ಕೋರ್ಟ್ ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಮಗ ವಿನೀಶ್, ತಾಯಿ ಮೀನಾ, ಸಹೋದರ ದಿನಕರ್ ಕೂಡಾ ಜೈಲಿಗೆ ಬಂದು ದರ್ಶನ್ ಭೇಟಿಯಾಗಿ ಹೋಗಿದ್ದಾರೆ. ಎಲ್ಲಾ ನೋಡಿದ ಮೇಲೆ ಕುಟುಂಬದವರ ಪ್ರಾಮುಖ್ಯತೆ ದರ್ಶನ್ ಗೆ ಅರ್ಥವಾಗಿದೆ ಎನ್ನಲಾಗಿದೆ.