ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಬಳಿಕ ದರ್ಶನ್ ಸಾಕ್ಷ್ಯ ನಾಶಕ್ಕಾಗಿ ಏನು ಮಾಡಿದರು ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಇದು ದರ್ಶನ್ ಗೆ ದೊಡ್ಡ ಕಂಟಕವಾಗಲಿದೆ.
ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ದರ್ಶನ್ ಎ2 ಆರೋಪಿಯಾಗಿದ್ದಾರೆ. ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾರೆ. ದರ್ಶನ್ ಈ ಕೇಸ್ ನಲ್ಲಿ ತಮ್ಮನ್ನು ಕಾಪಾಡಿಕೊಳ್ಳಲು ಸಾಕ್ಷ್ಯ ನಾಶಕ್ಕಾಗಿ ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ತನಿಖೆಯಲ್ಲಿ ಖಚಿತವಾಗಿದೆ. ಅದಕ್ಕಾಗಿ ಪೊಲೀಸರು ಸಾಕ್ಷ್ಯವನ್ನೂ ಸಿದ್ಧಪಡಿಸಿದ್ದಾರೆ.
ಈ ಮೂಲಕ ಇದು ಉದ್ದೇಶಪೂರ್ವಕವಾಗಿ ಮಾಡಿದ ಕೃತ್ಯ ಎಂದು ಸಾಬೀತುಪಡಿಸಲಿದ್ದಾರೆ. ಅಲ್ಲದೆ, ಕೊಲೆ ಮಾಡಿದಂತೇ ಸಾಕ್ಷ್ಯ ನಾಶ ಕೂಡಾ ಗಂಭೀರ ಆರೋಪವಾಗಿದೆ. ಹೀಗಾಗಿ ಇದಕ್ಕೂ ಕಾನೂನಿನಲ್ಲಿ ಕಠಿಣ ಶಿಕ್ಷೆಯೇ ಇದೆ. ಕೊಲೆ ನಡೆದ ಬಳಿಕ ಅದನ್ನು ಮುಚ್ಚಿಹಾಕಲು 80 ಲಕ್ಷ ಹಣವನ್ನು ತಮ್ಮ ಆಪ್ತರಿಂದ ದರ್ಶನ್ ಪಡೆದಿದ್ದರು.
ಈ ಬಗ್ಗೆ ಅವರ ಆಪ್ತರನ್ನು ವಿಚಾರಣೆ ನಡೆಸಿ ಸಾಕ್ಷ್ಯ ಸಂಗ್ರಹಿಸಲಾಗಿದೆ. ಹಣ ನೀಡಿದ ಬಗ್ಗೆ ಇಬ್ಬರೂ ಆಪ್ತ ಸ್ನೇಹಿತರು ಒಪ್ಪಿಕೊಂಡಿದ್ದಾರೆ. ಈ ಮೂಲಕ ದರ್ಶನ್ ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದಕ್ಕೆ ಪ್ರಬಲ ಸಾಕ್ಷಿಯೇ ಸಿಕ್ಕಿದಂತಾಗಿದೆ.