Video: ನಟ ದರ್ಶನ್ ಗೆ ಈಗ ಎಲ್ಲೇ ಹೋದ್ರೂ ವೈಫು ವಿಜಿ ಜೊತೆಗಿರಲೇಬೇಕು
ಜೈಲಿನಿಂದ ಹೊರ ಬಂದ ಮೇಲೆ ದರ್ಶನ್ ಎಲ್ಲಾ ವ್ಯವಹಾರಗಳನ್ನು ವಿಜಯಲಕ್ಷ್ಮಿ ನೋಡಿಕೊಳ್ಳುತ್ತಾರೆ. ಎಲ್ಲೇ ಹೋಗುವುದಿದ್ದರೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೇ ಹೋಗುತ್ತಾರೆ. ಇದರ ಬಗ್ಗೆ ಅಭಿಮಾನಿಗಳಲ್ಲೂ ಖುಷಿಯಿದೆ. ಇತ್ತೀಚೆಗೆ ಡೆವಿಲ್ ಶೂಟಿಂಗ್ ಸಂದರ್ಭದಲ್ಲೂ ದರ್ಶನ್ ಜೊತೆಗೆ ವಿಜಯಲಕ್ಷ್ಮಿ ಕೂಡಾ ರಾಜಸ್ಥಾನ್ ಗೆ ಪ್ರಯಾಣ ಬೆಳೆಸಿದ್ದರು.
ನಿನ್ನೆ ನಟ, ನಿರ್ಮಾಪಕ ಬಿ ಸುರೇಶ್ ದಂಪತಿ ಮಗಳು ಚಂದನಾ ಎಸ್ ನಾಗ್ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜೊತೆಗೆ ಬಂದು ಕೆಲವು ಹೊತ್ತು ಕಾರ್ಯಕ್ರಮ ವೀಕ್ಷಿಸಿದ್ದಾರೆ.
ಇಬ್ಬರೂ ಅಕ್ಕಪಕ್ಕ ಕುಳಿತುಕೊಂಡು ಭರತನಾಟ್ಯ ವೀಕ್ಷಿಸಿರುವುದನ್ನು ನೋಡಿ ಅಭಿಮಾನಿಗಳು ಈ ಜೋಡಿಗೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಹಾರೈಸಿದ್ದಾರೆ.