ದರ್ಶನ್ ಅಭಿನಯದ ರಾಜಮದಕರಿ ಸಿನಿಮಾ ಶೂಟಿಂಗ್ ಮುಹೂರ್ತ ಫಿಕ್ಸ್

ಮಂಗಳವಾರ, 22 ಸೆಪ್ಟಂಬರ್ 2020 (12:29 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಜ ವೀರಮದಕರಿ ನಾಯಕ ಸಿನಿಮಾ ಶೂಟಿಂಗ್ ಲಾಕ್ ಡೌನ್ ಕಾರಣದಿಂದ ಸ್ಥಗಿತವಾಗಿತ್ತು.


ಲಾಕ್ ಡೌನ್ ಗೂ ಮೊದಲು ಕೇರಳದಲ್ಲಿ ಕೆಲವು ದೃಶ್ಯಗಳ ಚಿತ್ರೀಕರಣ ನಡೆದಿತ್ತು. ಇದೀಗ ಲಾಕ್ ಡೌನ್ ಬಳಿಕ ಮತ್ತೆ ಶೂಟಿಂಗ್ ಪುನರಾರಂಭವಾಗಲಿದ್ದು, ಅಕ್ಟೋಬರ್ ನಲ್ಲಿ ಕರ್ನಾಟಕದ ಹಲವೆಡೆ ಚಿತ್ರೀಕರಣವಾಗಲಿದೆ ಎಂಬ ಮಾಹಿತಿ ಬಂದಿದೆ. ಇದು ಲಾಕ್ ಡೌನ್ ಬಳಿಕ ದರ್ಶನ್ ಪಾಲ್ಗೊಳ್ಳುತ್ತಿರುವ ಮೊದಲ ಸಿನಿಮಾ ಶೂಟಿಂಗ್ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ