ಚೆನ್ನೈ: ಕಮಲ್ ಹಾಸನ್ ಮತ್ತು ಗೌತಮಿ ತಮ್ಮ ಲಿವಿಂಗ್ ಟುಗೆದರ್ ಬಾಂಧವ್ಯಕ್ಕೆ ಕೊನೆಗಾಣಿಸಲು ನಿರ್ಧರಿಸಿದ್ದರ ಹಿಂದಿರುವ ಕಾರಣವೇನು ಎಂಬ ಬಗ್ಗೆ ಹಲವು ಗಾಸಿಪ್ ಗಳು ಹರಿದಾಡುತ್ತಿವೆ.
ಕೆಲವರು ಇವರಿಬ್ಬರು ಬೇರಾಗಲು ಮಗಳು ಶೃತಿ ಕಮಲ್ ಹಾಸನ್ ಅವರೇ ಕಾರಣ ಎನ್ನುತ್ತಿದ್ದಾರೆ. ಅಷ್ಟಕ್ಕೂ ಶೃತಿ ಬೇರೇನೂ ಮಾಡಿಲ್ಲ. ಆದರೆ ಶೃತಿಗೆ ಗೌತಮಿಯನ್ನು ಕಂಡರೆ ಅಷ್ಟಕ್ಕಷ್ಟೇ ಎನ್ನಲಾಗುತ್ತಿತ್ತು.
ಇದಕ್ಕೆ ಪುಷ್ಟಿ ನೀಡುವಂತೆ ಶೃತಿ ಒಮ್ಮೆ ಸಂದರ್ಶನವೊಂದರಲ್ಲಿ, ಗೌತಮಿಯನ್ನು ಅಮ್ಮ ಎಂದು ಕರೆಯುತ್ತೀರಾ ಎಂದು ಕೇಳಿದ್ದಕ್ಕೆ ನಾನೇಕೆ ಆಕೆಯನ್ನು ಅಮ್ಮ ಎನ್ನಲಿ? ನನಗೆ ಸಾರಿಕಾ ಅಮ್ಮ. ಅವರೇ ನನ್ನ ಬೆಸ್ಟ್ ಫ್ರೆಂಡ್. ನನ್ನ ಅಪ್ಪನಿಗೆ ಯಾರು ಇಷ್ಟವಾಗುತ್ತಾರೋ ಅವರ ಜತೆ ಇರಲಿ. ಅದರ ಬಗ್ಗೆ ನನ್ನ ತಕರಾರು ಇಲ್ಲ ಎಂದಿದ್ದರು.
ಇದಲ್ಲದೆ ಒಮ್ಮೆ ಶೃತಿ ತಮ್ಮ ಚಿತ್ರದ ಕಾಸ್ಟ್ಯೂಮ್ ವಿಚಾರಕ್ಕೆ ಗೌತಮಿ ಜತೆ ಮನಸ್ತಾಪ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರಿಬ್ಬರ ನಡುವಿನ ಸಂಬಂಧ ಚೆನ್ನಾಗಿರಲಿಲ್ಲ ಎನ್ನಲಾಗುತ್ತಿತ್ತು. ಇದೇ ಕಾರಣಕ್ಕೆ ಅವರು ಬೇರೆ ಆಗಿರಬಹುದು ಎಂದು ಗಾಸಿಪ್ ಪಂಡಿತರು ಹೇಳುತ್ತಿದ್ದಾರೆ. ಆದರೆ ನಿಜವಾದ ಕಾರಣ ಏನೆಂದು ಕಮಲ್ ಆಗಲಿ ಗೌತಮಿ ಆಗಲಿ ಹೇಳಿಕೊಂಡಿಲ್ಲ.
ಅಲ್ಲದೆ ಕಮಲ್ ತಮ್ಮಿಬ್ಬರ ಬಿರುಕಿನ ಬಗ್ಗೆ ನಾನು ಯಾವುದೇ ಕಾಮೆಂಟ್ ಮಾಡುವುದಿಲ್ಲ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನನ್ನ ಅಭಿಪ್ರಾಯ ಯಾರದೋ ಸೃಷ್ಟಿ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ