ಪದ್ಮಾವತಿ ಸಿನಿಮಾದಲ್ಲಿ ರಣವೀರ್ ಸಿಂಗ್- ದೀಪಿಕಾ ಪಡುಕೋಣೆ ರೊಮ್ಯಾನ್ಸ್ ಮಾಡಲ್ಲ
ಮುಂಬೈ: ಸಂಜಯ್ ಲೀಲಾ ಬನ್ಸಾಲಿಯವರ ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವಿರ್ ಸಿಂಗ್ ಜತೆಯಾಗಿ ನಟಿಸುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಗೊತ್ತಿರುವ ಸಂಗತಿಯೇ. ಆದರೆ ಈ ಚಿತ್ರದಲ್ಲಿ ಅವರ ರೊಮ್ಯಾನ್ಸ್ ಇರುವುದಿಲ್ಲವಂತೆ.
ಇವರಿಬ್ಬರೂ ಕೆಲವು ದಿನಗಳ ಕಾಲ ಪ್ರೇಮಿಗಳಾಗಿದ್ದವರು, ನಂತರ ಬ್ರೇಕ್ ಅಪ್ ಆಗಿದ್ದಾರೆ ಎನ್ನುವ ಸುದ್ದಿಯೂ ಬಂದಿತ್ತು. ಹೀಗಾಗಿ ಈ ಚಿತ್ರದಲ್ಲಿ ಅವರು ರೊಮ್ಯಾಂಟಿಕ್ ದೃಶ್ಯಗಳಿರಬಹುದೇನೋ ಎಂದು ಕಾದು ಕೂತಿದ್ದವರಿಗೆ ನಿರಾಸೆಯಾಗಿದೆ.
ದೀಪಿಕಾ ರಾಣಿ ಪದ್ಮಾವತಿ ಪಾತ್ರ ಮಾಡುತ್ತಿದ್ದು ಆಕೆಯ ಜೋಡಿಯಾಗಿ ಶಾಹಿದ್ ಕಪೂರ್ ರಾಜಾ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರಣವೀರ್ ಸಿಂಗ್ ಅಲಾವುದೀನ್ ಖಿಲ್ಜಿ ಪಾತ್ರ ಮಾಡುತ್ತಿದ್ದಾರೆ.