ಸಂಜಯ್ ಲೀಲಾ ಬನ್ಸಾಲಿ ಮುಂದಿನ ಸಿನಿಮಾದಲ್ಲಿ ರಣ್‌ವೀರ್ –ದೀಪಿಕಾ?

ಶನಿವಾರ, 25 ಜೂನ್ 2016 (09:43 IST)
ರಣ್‌ವೀರ್ ಸಿಂಗ್  ಹಾಗೂ ದೀಪಿಕಾ ಪಡುಕೋಣೆ ಅವರ ಸಿನಿಮಾಗಳು ಅಂದಾಕ್ಷಣ ತಕ್ಷಣ ನೆನಪಾಗೋದು ಸಂಜಯ್ ಲೀಲಾ ಬನ್ಸಾಲಿ. ಈಗಾಗಲೇ ಸಂಜಯ್ ಲೀಲಾ ಬಸ್ಸಾಲಿ ಅವರ ಸೂಪರ್ ಹಿಟ್ ಸಿನಿಮಾ ಭಾಜೀರಾವ್ ಮಸ್ತಾನಿ ಹಾಗೂ ರಾಮ್ ಲೀಲಾ ಸಿನಿಮಾಗಳಲ್ಲಿ ಅಭಿನಯಿಸಿರುವ ರಣ್‌ವೀರ್ ಹಾಗೂ ದೀಪಿಕಾ ಅವರ ಮುಂದಿನ ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರಂತೆ.

ಅಂದ್ಹಾಗೆ ಈಗಾಗಲೇ ಭಾಜೀರಾವ್ ಮಸ್ತಾನಿ ಹಾಗೂ ರಾಮ್ ಲೀಲಾ ಸಿನಿಮಾದ ಸಕ್ಸಸ್ ನ ಖುಷಿಯಲ್ಲಿರುವ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಇದೀಗ ಮತ್ತೊಮ್ಮೆ ಇದೇ ಜೋಡಿಯನ್ನು ಇಟ್ಟುಕೊಂಡು ಸಿನಿಮಾ ಮಾಡೋದಕ್ಕೆ ಮುಂದಾಗಿದ್ದಾರೆ, ಇತ್ತೀಚೆಗಷ್ಟೇ ದೀಪಿಕಾಪಡುಕೋಣೆ ಅವರು ಕೂಡ ತಾನು ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತಿ ಅನ್ನೋ  ಸಿನಿಮಾದಲ್ಲಿ ಅಭಿನಯಿಸುತ್ತಿದ್ದೇನೆ ಅಂತಾ ಹೇಳಿದ್ದರು. ಇದೀಗ ಸಂಜಯ್ ಲೀಲಾ ಅವರು ಕೂಡ ಇದನ್ನೇ ಪುನರುಚ್ಛರಿಸಿದ್ದಾರೆ.ಅಂದ್ಹಾಗೆ ಈ ಸಿನಿಮಾ ಇದೇ ವರ್ಷ ಸಪ್ಟಂಬರ್‌ನಲ್ಲಿ ಸೆಟ್ಟೇರಲಿದೆಯಂತೆ.
 
ಅಂದ್ಹಾಗೆ ಖುಷಿಯ ವಿಚಾರ ಅಂದ್ರೆ ಈ ಸಿನಿಮಾದಲ್ಲಿ ರಣ್‌ವೀರ್ ಸಿಂಗ್ ಅವರು ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ಇನ್ನು ಡಿಂಪಲ್ ಹುಡುಗಿ ದೀಪಿಕಾ ಪಡುಕೋಣಿ ಅವರು ರಾಣಿ ಪದ್ಮಾವತಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮಾಸನ್ ಸಿನಿಮಾ ಖ್ಯಾತಿಯ ವಿಕ್ಕಿ ಕುಶಾಲ್ ಅವರು ಕಾಲು ಕಳೆದುಕೊಂಡ ಪತಿಯ ಪಾತ್ರವನ್ನು ಮಾಡಲಿದ್ದಾರಂತೆ. ಹಾಗಾಗಿ ಈ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟಿ ಹಾಕಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ