ಸೆರೆವಾಸದಲ್ಲಿರುವ ದರ್ಶನ್‌ರನ್ನು ಭೇಟಿಯಾದ ಡೆವಿಲ್ ನಿರ್ಮಾಪಕ

Sampriya

ಗುರುವಾರ, 26 ಸೆಪ್ಟಂಬರ್ 2024 (18:09 IST)
ಬೆಂಗಳೂರು:  ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಅಭಿನಯದ ಡೆವಿಲ್ ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತಿದೆ. ದರ್ಶನ್ ಜೈಲು ಸೇರಿ 100ದಿನ ಕಳೆದಿದ್ದು, ಚಿತ್ರದ ನಿರ್ದೇಶಕರು ಹಾಗೂ ನಿರ್ಮಾಪಕರು  ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ದಿಢೀರನೇ ಚಿತ್ರದ ನಿರ್ಮಾಪಕರು ಜೈಲಿಗೆ ಭೇಟಿ ನೀಡಿ ದರ್ಶನ್ ಜತೆ ಮಾತುಕತೆ ನಡೆಸಿದ್ದಾರೆ.

ಇಂದು ಹಣದ ವಿಚಾರವಾಗಿ ಐಟಿ ಅಧಿಕಾರಿಗಳು ದರ್ಶನ್ ವಿಚಾರಣೆ ನಡೆಸಿ ಹೋದಮೇಲೆ ಜೆ.ಬಿ.ಪ್ರಕಾಶ್, ಸುನೀಲ್ ಕುಮಾರ್ ಮತ್ತು ಶ್ರೀನಿವಾಸ  ಅವರು ದರ್ಶನ್ ಭೇಟಿ ಮಾಡಿದ್ದಾರೆ. ಈ ವೇಳೆ ದಾಸನಿಗೆ ನಿರ್ಮಾಪಕರು ಧೈರ್ಯ ತುಂಬಿದ್ದಾರೆ ಎಂಬ ಮಾಹಿತಿಯಿದೆ.

ಭೇಟಿ ವೇಳೆ ಡೆವಿಲ್ ಸಿನಿಮಾದ ನಿರ್ಮಾಪಕರಾಗಿರುವ ಪ್ರಕಾಶ್ ಅವರು ದರ್ಶನ್‌ಗೆ ಡ್ರೈ ಪ್ರೂಟ್ಸ್, ಬಟ್ಟೆ ಹಾಗೂ ಹಣ್ಣುಗಳನ್ನು ತಂದಿದ್ದಾರೆ. ದರ್ಶನ್ ಜತೆ ಸುಮಾರು 20ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ.

ದರ್ಶನ್ ಅವರು ಮುಂದಿನ ಬಹುನಿರೀಕ್ಷಿತ ಡೆವಿಲ್ ಸಿನಿಮಾವನ್ನು ಮಿಲನಾ ಪ್ರಕಾಶ್, ನಿರ್ದೇಶಿಸಿ, ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಶೂಟಿಂಗ್ ಇದೀಗ ಅರ್ಧಕ್ಕೆ ನಿಂತಿದೆ. ಇದೀಗ ದರ್ಶನ್ ಜತೆ ಸಿನಿಮಾ ಕಥೆ ಹಾಗೂ ಮುಂದಿನ ಹೆಜ್ಜೆ ಬಗ್ಗೆ ಮಾತುಕತೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ