ಕೈವಾ ಟೀಸರ್ ರಿಲೀಸ್: ಕತ್ತಿಯಷ್ಟೇ ಹರಿತ ಧನ್ವೀರ್, ಹೂವಿನಷ್ಟೇ ಮೃದು ಮೇಘಾ ಶೆಟ್ಟಿ!
ಜ್ಯೂ.ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಟೀಸರ್ ಲಾಂಚ್ ಮಾಡಿದ್ದಾರೆ. ಟೀಸರ್ ನೋಡಿದರೆ ದನ್ವೀರ್ ಗೆ ಈ ಸಿನಿಮಾದಲ್ಲಿ ಸಖತ್ ರಗಡ್ ಪಾತ್ರ ಎನ್ನುವುದು ಸ್ಪಷ್ಟವಾಗುತ್ತದೆ. ಭರ್ಜರಿ ಫೈಟ್ ಗಳ ಮೂಲಕ ಧನ್ವೀರ್ ಮಿಂಚಿದ್ದಾರೆ. ನಾಯಕಿಯಾಗಿ ಈ ಸಿನಿಮಾದಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ. ಮಾಸ್ ಹೀರೋನ ಕೂಲ್ ಮಾಡುವ ಹುಡುಗಿಯಾಗಿ ಮೇಘಾ ಕಾಣಿಸಿಕೊಂಡಿದ್ದಾರೆ.
ವಿಶೇಷವೆಂದರೆ ಈ ಸಿನಿಮಾದಲ್ಲಿ ದರ್ಶನ್ ಸಹೋದರ ದಿನಕರ್ ತೂಗುದೀಪ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಪಾತ್ರವನ್ನು ನೋಡಿದ ತೂಗುದೀಪ ಶ್ರೀನಿವಾಸ್ ಅವರನ್ನು ನೋಡಿದಂತಾಗುತ್ತದೆ ಎಂದು ಹಲವರು ಈಗಾಗಲೇ ಹೇಳುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಈ ಸಿನಿಮಾದಲ್ಲಿ ಕರಗವನ್ನು ತೋರಿಸಲಾಗಿದ್ದು, ಇಲ್ಲಿಯೇ ನಾಯಕ-ನಾಯಕಿಗೆ ಲವ್ ಶುರುವಾಗುತ್ತದೆ ಎಂದಿದೆ ಚಿತ್ರತಂಡ. ಹೀಗಾಗಿ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.