ದೊಡ್ಮನೆ ಹುಡುಗ ಧೀರೇನ್ ಚಿತ್ರರಂಗದಲ್ಲಿ ಮಿಂಚ್ತಾನಾ?
ತಂದೆ ರಾಮ್ ಕುಮಾರ್ ಕೂಡಾ ನಾಯಕ ನಟನಾಗಿ ಒಂದು ಕಾಲದಲ್ಲಿ ಹೆಣ್ಣು ಮಕ್ಕಳ ಫೇವರಿಟ್ ಆಗಿದ್ದರು. ಕೆಲವು ಸಮಯದ ಮೊದಲು ರಾಮ್ ಕುಮಾರ್ ಪುತ್ರಿ ಧನ್ಯಾ ನಿನ್ನ ಸನಿಹಕೆ ಸಿನಿಮಾ ಮೂಲಕ ತೆರೆಗೆ ಬಂದು ಅಭಿನಯ ತಮ್ಮ ರಕ್ತದಲ್ಲೇ ಬಂದಿದೆ ಎಂದು ಸಾಬೀತುಪಡಿಸಿದ್ದರು.
ಇದೀಗ ಧೀರೇನ್ ಸರದಿ. ಈ ಮೊದಲು ಮಾವ ಪುನೀತ್ ರಾಜ್ ಕುಮಾರ್ ಶಿವ 143 ಚಿತ್ರದ ತುಣುಕೊಂದನ್ನು ನೋಡಿ ಕೊನೆಗೂ ನಮ್ಮ ಕುಟುಂಬದಿಂದ ಒಬ್ಬ ಹೀರೋ ಬಂದ ಎಂದಿದ್ದರಂತೆ. ಅದು ನಿಜವಾಗುತ್ತದಾ ಎಂದು ನೋಡಬೇಕಾದರೆ ಇಂದು ಪ್ರೇಕ್ಷಕರು ಕೊಡುವ ತೀರ್ಪಿನ ಮೇಲೆ ನಿಂತಿದೆ.