ಬರ್ತ್ ಡೇ ಆಚರಿಸಿಕೊಳ್ಳದಿರಲು ಎರಡು ಕಾರಣ ಕೊಟ್ಟ ಧ್ರುವ ಸರ್ಜಾ
ಇದಕ್ಕೆ ಪ್ರಮುಖವಾಗಿ ಎರಡು ಕಾರಣವೆಂದರೆ ಒಂದು ಕೊವಿಡ್. ಜನ ಸೇರುವುದು ಅಪಾಯ ಎಂಬ ಕಾರಣಕ್ಕೆ ಸೆಲಬ್ರೇಷನ್ ಮಾಡಲ್ಲ. ಇನ್ನೊಂದು ಕಾರಣವೆಂದರೆ ಆ ದಿನ ನಾನು ಊರಲ್ಲಿ ಇರಲ್ಲ. ವಿಶಾಖಪಟ್ಟಣಂಗೆ ಶೂಟಿಂಗ್ ಗೆ ತೆರಳುತ್ತಿದ್ದೇನೆ. ಅಭಿಮಾನಿಗಳ ಬಳಗ ಹೊಂದಿರವಷ್ಟು ದೊಡ್ಡವನು ನಾನಲ್ಲ. ಆದರೂ ನನಗಿರುವ ಚಿಕ್ಕ ವಿಐಪಿಗಳ ಸಮೂಹಕ್ಕೆ ನಾನು ಈ ಮನವಿ ಮಾಡುತ್ತಿದ್ದೇನೆ ಎಂದು ಧ್ರುವ ಸರ್ಜಾ ಹೇಳಿದ್ದಾರೆ.