ಮೇಘನಾ ರಾಜ್ ರನ್ನು ಎರಡನೇ ತಾಯಿ ಎಂದು ಪರಿಚಯ ಮಾಡಿದ್ದರಂತೆ ಧ್ರುವ ಸರ್ಜಾ ಅಮ್ಮ
ಶನಿವಾರ, 28 ಮೇ 2022 (08:40 IST)
ಬೆಂಗಳೂರು: ಈ ವಾರ ಕಿರುತೆರೆಯಲ್ಲಿ ಭರ್ಜರಿ ಮನರಂಜನೆ ಸಿಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಇಂದು ಮತ್ತು ನಾಳೆ ಡ್ಯಾನ್ಸಿಂಗ್ ಸ್ಟಾರ್ ಶೋನ ಗ್ರ್ಯಾಂಡ್ ಫಿನಾಲೆ ಎಪಿಸೋಡ್ ಗಳು ಪ್ರಸಾರವಾಗಲಿದೆ.
ಈ ಫಿನಾಲೆಗೆ ವಿಶೇಷ ಅತಿಥಿಗಳಾಗಿ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬರುತ್ತಿರುವುದು ವಿಶೇಷವಾದರೆ, ಧ್ರುವ ಸರ್ಜಾ ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗುಳ್ಳುತ್ತಿರುವುದು ವಿಶೇಷ.
ಮೇಘನಾ ರಾಜ್ ತೀರ್ಪುಗಾರರಲ್ಲಿ ಒಬ್ಬರಾಗಿದ್ದು, ಬಾಮೈದ ಧ್ರುವ ಕೂಡಾ ಶೋನಲ್ಲಿ ತಮ್ಮಿಬ್ಬರ ನಡುವಿನ ಬಾಂಧವ್ಯದ ಬಗ್ಗೆ ಹಂಚಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ಅತ್ತಿಗೆಯಾಗಿ ಮನೆಗೆ ಬಂದಾಗ ತಮ್ಮ ಅಮ್ಮ ಮೇಘನಾರನ್ನು ನಿನ್ನ ಎರಡನೇ ತಾಯಿ ಎಂದು ಪರಿಚಯ ಮಾಡಿಸಿದ್ದರು ಎಂದಿದ್ದಾರೆ ಧ್ರುವ. ಇನ್ನು ಅತ್ತಿಗೆ ಹೊರಗೆ ತುಂಬಾ ಸ್ಟ್ರಾಂಗ್ ಆದರೆ ಒಳಗಿನಿಂದ ತುಂಬಾ ಇಮೋಷನಲ್ ಎಂದಿದ್ದಾರೆ. ಇನ್ನು, ಧ್ರುವ ಬಗ್ಗೆ ಮಾತನಾಡಿರುವ ಮೇಘನಾ, ಧ್ರುವ ಕುಟುಂಬಕ್ಕೆ ತುಂಬಾ ಬೆಲೆಕೊಡುವ ವ್ಯಕ್ತಿ ಎಂದು ಹೊಗಳಿದ್ದಾರೆ. ಅತ್ತಿಗೆ-ಮೈದುನನ ಜೋಡಿಯ ಈ ಬಾಂಧವ್ಯ ನೋಡಿ ನೆಟ್ಟಿಗರು ಯಾರ ದೃಷ್ಟಿಯೂ ಇವರ ಮೇಲೆ ಬೀಳದಿರಲಿ ಎಂದು ಹಾರೈಸಿದ್ದಾರೆ.