ಮೂವರು ಅನಾಥ ಮಕ್ಕಳನ್ನು ದತ್ತು ಪಡೆದು ಮಾನವೀಯತೆ ಮೆರೆದ ನಿರ್ಮಾಪಕ ದಿಲ್ ರಾಜು
ತಂದೆತಾಯಿಯನ್ನು ಕಳೆದುಕೊಂಡ ಈ ಮೂವರು ಮಕ್ಕಳ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಮಕ್ಕಳಿಗೆ ಸಹಾಯ ಮಾಡುವುದಾಗಿ ಬಾಲಿವುಡ್ ನಟ ಸೋನು ಸೂದ್ ಭರವಸೆ ನೀಡಿದ್ದರು. ಅವರಿಂದ ಪ್ರೇರಿತರಾದ ನಿರ್ಮಾಪಕ ದಿಲ್ ರಾಜು ಅವರೇ ಮಕ್ಕಳನ್ನು ದತ್ತು ಪಡೆದು ಅವರ ಜವಾಬ್ದಾರಿಯನ್ನು ತೆಗೆದುಕೊಳ್ಳುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ.