ಯಶ್ ಜತೆ ಮುಂದಿನ ಸಿನಿಮಾ ರೂಮರ್ಸ್ ಬಗ್ಗೆ ನಿರ್ದೇಶಕ ನರ್ತನೆ ಹೇಳಿದ್ದೇನು?

ಶನಿವಾರ, 9 ಮೇ 2020 (10:35 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ‘ಮುಫ್ತಿ’ ಖ್ಯಾತಿಯ ನಿರ್ದೇಶಕ ನರ್ತನ್ ಜತೆಗೆ ಬಹುಭಾಷಾ ಸಿನಿಮಾವೊಂದನ್ನು ಮಾಡುತ್ತಾರೆ ಎಂಬ ಸುದ್ದಿಯಾಗಿತ್ತು.


ಈ ಸಿನಿಮಾದಲ್ಲಿ ಟಾಲಿವುಡ್ ನಟಿ ತಮನ್ನಾ ಭಾಟಿಯಾ ಯಶ್ ಗೆ ನಾಯಕಿಯಾಗುತ್ತಾರೆ ಎಂದೂ ರೂಮರ್ ಹರಡಿತ್ತು. ಈ ಬಗ್ಗೆ ನರ್ತನ್ ಸ್ಪಷ್ಟನೆ ನೀಡಿದ್ದಾರೆ.

ನಾಯಕಿ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಯಶ್ ಜತೆ ಇನ್ನೂ ನೇರವಾಗಿ ಕೂತು ಮಾತುಕತೆ ನಡೆಸಿಲ್ಲ. ಈ ಬಗ್ಗೆ ಫೋನ್ ಮೂಲಕವಷ್ಟೇ ಚರ್ಚೆ ನಡೆಸಿದ್ದೇವೆ. ಅದಾದ ಬಳಿಕವೇ ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ