ರಾಜಕೀಯಕ್ಕೆ ಬರುವುದರ ಕುರಿತು ನಟ ಯಶ್ ಹೇಳಿದ್ದೇನು ಗೊತ್ತಾ…?
ಶನಿವಾರ, 24 ಮಾರ್ಚ್ 2018 (06:34 IST)
ಬೆಂಗಳೂರು : ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಸಿನಿಮಾ ತಾರೆಯರು ಕೂಡ ರಾಜಕೀಯಕ್ಕೆ ಪ್ರವೇಶಿಸಿದ್ದು, ಅದೇರೀತಿ ರಾಕಿಂಗ್ ಸ್ಟಾರ್ ಯಶ್ ಅವರು ಕೂಡ ರಾಜಕೀಯ ಪಕ್ಷದ ಪರ ಪ್ರಚಾರ ಮಾಡುತ್ತಾರಾ ಎಂಬ ಪ್ರಶ್ನೆ ಹಲವರಲ್ಲಿತ್ತು. ಆದರೆ ಇದೀಗ ಯಶ್ ಅವರೇ ಇದಕ್ಕೆ ಸ್ಪಷ್ಟ ಉತ್ತರ ನೀಡಿದ್ದಾರೆ.
ನಟ ಯಶ್ ಅವರು ತಾವು ಅಭಿನಯಿಸಲಿರುವ ಸ್ಪರ್ಶ ರೇಖಾ ನಿರ್ಮಾಣದ `ಡೆಮೋ ಪೀಸ್’ ಚಿತ್ರದ ಮುಹೂರ್ತ ಸಮಾರಂಭದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾಧ್ಯಮದವರು ರಾಜಕೀಯಕ್ಕೆ ಬರುತ್ತಿರಾ ಎಂದು ಕೇಳಿದಾಗ ಅದಕ್ಕೆ ಅವರು,’ ನಾನು ಯಾವುದೇ ಪಕ್ಷದ ಪರ ಪ್ರಚಾರಕ್ಕೆ ಹೋಗಲ್ಲ. ಯಾಕಂದ್ರೆ ಒಂದಾ ಪಕ್ಷದ ಅಭ್ಯರ್ಥಿಗಳು ನನ್ನ ಸ್ನೇಹಿತರಾಗಿರಬೇಕು. ಇಲ್ಲವೇ ಅವರ ಬಗ್ಗೆ ನನಗೆ ತಿಳಿದಿರಬೇಕು. ಆದ್ರೆ ರಾಜಕೀಯದಲ್ಲಿ ನನಗೆ ಯಾರೂ ಕೂಡ ಪರಿಚಯವಿಲ್ಲ. ರಾಜಕೀಯದ ನಂಟೂ ಕೂಡ ನನಗಿಲ್ಲ. ಹೀಗಾಗಿ ಒಂದು ಪಕ್ಷದ ಪರ ಪ್ರಚಾರಕ್ಕೆ ತೆರಳುವುದು ನನ್ನ ವೈಯಕ್ತಿಕ ದೃಷ್ಟಿಯಿಂದ ಸರಿಯಿಲ್ಲ’ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ