ಅಯೋಗ್ಯ ಸಿನಿಮಾದ ನಂತರ ನೀನಾಸಂ ಸತೀಶ್ ಕೇಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ?

ಗುರುವಾರ, 4 ಅಕ್ಟೋಬರ್ 2018 (08:29 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ನಟ ನೀನಾಸಂ ಸತೀಶ್ ಇದೀಗ ತಮ್ಮ ಸಿನಿಮಾ ಸಂಭಾವನೆಯನ್ನ ದುಪ್ಪಟ್ಟು ಮಾಡಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.


ಹೌದು. ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟನಾಗಿ ಬಣ್ಣಹಚ್ಚಿದ ನಟ ನೀನಾಸಂ ಸತೀಶ್ ಅವರು ನಂತರ ತನ್ನ ಸ್ವಂತ ಪ್ರತಿಭೆಯ ಮೂಲಕ ಸ್ಯಾಂಡಲ್ ವುಡ್ ನ ಸ್ಟಾರ್ ನಟ ಎನಿಸಿಕೊಂಡಿದ್ದಾರೆ. ಇವರು ನಟಿಸಿದ ಕನ್ನಡ ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಅದರಲ್ಲು ಅಯೋಗ್ಯ ಸಿನಿಮಾದ ಮೂಲಕ‌ ತನ್ನ ನಟನಾ ಬದುಕಿನಲ್ಲೇ ಎಂದೂ  ಕಾಣದ ದೊಡ್ಡ ಯಶಸ್ಸು ಪಡೆದುಕೊಂಡಿದ್ದಾರೆ.


ಹೀಗಾಗಿ ನಿರ್ಮಾಪಕರು ನೀನಾಸಂ ಕಾಲ್ ಶೀಟ್ ಗಾಗಿ ಕಾಯುತ್ತಿದ್ದಾರಂತೆ. ಆದಕಾರಣ ಇದೀಗ ನಟ ನೀನಾಸಂ ಸತೀಶ್ ತಮ್ಮ ಸಂಭಾವನೆಯನ್ನ ದುಪ್ಪಟ್ಟು ಮಾಡಿದ್ದಾರೆ ಎನ್ನಲಾಗುತ್ತಿದೆ. ಹೌದು ಈ ಮೊದಲು ಅಂದರೆ ಅಯೋಗ್ಯ ಚಿತ್ರಕ್ಕೂ ಮುನ್ನ ನೀನಾಸಂ‌ ಸಂಭಾವನೆಯು ಒಂದು ಕೋಟಿಯ ಒಳಗಿತ್ತಂತೆ . ‌ ಆದರೆ ಈಗ ಇದು ಹೆಚ್ಚಾಗಿದ್ದು ಒಂದೊಂದು‌ ಸಿನಿಮಾಗೆ‌ ಹತ್ತಿರಹತ್ತಿರ ಎರಡು ಕೋಟಿ ಕೇಳುತ್ತಿದ್ದಾರೆ ಅನ್ನೋ ಮಾತಿದೆ. ಇನ್ನು ವಿಶೇಷ ಅಂದ್ರೆ ನಟ ನೀನಾಸಂ ಸತೀಶ್ ಎರಡು ಕೋಟಿ ಕೇಳಿದರೂ ಅದನ್ನು ಕೊಡಲು ನಿರ್ಮಾಪಕರು ಸಹ ಮುಂದೆ ಬಂದಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ