ಕಣ್ಣಿನಲ್ಲಿ ಪಿಸಿರು ಸೋರುತ್ತಿದ್ದರೆ ಅದನ್ನು ಕಡಿಮೆ ಮಾಡಲು ಹೀಗೆ ಮಾಡಿ
ಬುಧವಾರ, 3 ಅಕ್ಟೋಬರ್ 2018 (14:06 IST)
ಬೆಂಗಳೂರು : ಕೆಲವರಿಗೆ ಕಣ್ಣಲ್ಲಿ ಯಾವಾಗಲೂ ಪಿಸಿರು ಸೋರುತ್ತಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಕೆಲವರಿಗೆ ಬೆಳಿಗ್ಗೆ ಕಣ್ಣು ತೆರೆಯಲು ಕಷ್ಟವಾಗುತ್ತದೆ. ಚಿಕ್ಕ ಮಕ್ಕಳಿಗೂ ಕೂಡ ಈ ಸಮಸ್ಯೆ ಕಾಡುತ್ತದೆ. ಆದ್ದರಿಂದ ಇಂಥ ಸಮಸ್ಯೆಗೆ ಇಲ್ಲಿದೆ ನೋಡಿ ಸೂಕ್ತ ಪರಿಹಾರ.
ದಿನಕ್ಕೆ 2 ಬಾರಿ ಅಲೊವೆರಾ ಜೆಲ್ ಅನ್ನು ಕಣ್ಣಿನ ಸುತ್ತ ಮತ್ತು ರೆಪ್ಪೆಗಳ ಮೇಲೆ ಹಚ್ಚಿದರೆ ಪ್ರಯೋಜನವಿದೆ ಮತ್ತು ಸೋಂಪು ಕಾಳನ್ನು ಬಿಸಿ ನೀರಲ್ಲಿ ಅರ್ಧ ಗಂಟೆ ನೆನೆಸಿ. ನಂತರ ಆ ನೀರಿನಲ್ಲಿ ಹತ್ತಿ ಅದ್ದಿ ಕಣ್ಣಿನ ಮೇಲೆ ಇಟ್ಟುಕೊಂಡರೆ ಕಣ್ಣಿನ ಪಿಸುರು ಕಡಿಮೆಯಾಗುತ್ತದೆ
ಜೇನುತುಪ್ಪಕ್ಕೆ ನೀರು ಹಾಕಿ ಕಲಸಿ ರೆಪ್ಪೆ ಮೇಲೆ ಲೇಪಿಸಿದರೆ ಕಣ್ಣಿನ ಪಿಸುರು ಕಡಿಮೆಯಾಗುತ್ತದೆ. ಮಲಗುವ ಮುನ್ನ ಕಣ್ಣಿನ ಮೇಲೆ ರೋಸ್‌ವಾಟರ್ ಹಚ್ಚಿ ಮಲಗಿದರೆ ಪಿತ್ತ ಹೆಚ್ಚಾಗಿ ಬರುವ ಕಣ್ಣಿನ ಪಿಸುರು ಕಡಿಮೆಯಾಗುತ್ತದೆ.ದಿನಕ್ಕೆ 2 ಬಾರಿ ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ಕಣ್ಣಿನ ಅರೋಗ್ಯ ಹೆಚ್ಚುವುದಲ್ಲದೆ ಪಿಸಿರು ಸಹ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ