ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ನಿಜವಾದ ಹೆಸರೇನು ಗೊತ್ತಾ?

ಗುರುವಾರ, 4 ಅಕ್ಟೋಬರ್ 2018 (08:26 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ಬುಧವಾರ  ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ನಟಿ ರಚಿತಾ ರಾಮ್ ಕುರಿತಾದ  ಕುತೂಹಲಕಾರಿ ವಿಚಾರವೊಂದು ತಿಳಿದುಬಂದಿದೆ.


ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಟಿಸಿದ 'ಬುಲ್ ಬುಲ್' ಸಿನಿಮಾಕ್ಕೆ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ರಚಿತಾ ರಾಮ್ ತಮ್ಮ ಗುಳಿ ಕನ್ನೆಯ ನಗೆಯ ಮೂಲಕ ಚಿತ್ರರಸಿಕರ ಮನೆಗೆದ್ದಿದ್ದರು. ನಂತರ ಅಲ್ಲಿಂದ ಅನೇಕ ಸ್ಟಾರ್ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯರಲ್ಲಿ ನಟಿ ರಚಿತಾ ರಾಮ್ ಕೂಡ ಒಬ್ಬರು.


ಆದರೆ ಇಷ್ಟೊಂದು ಹೆಸರು ಮಾಡಿರುವ ಈ ನಟಿಯ ಹೆಸರು ರಚಿತಾ ರಾಮ್ ಅಲ್ಲವಂತೆ. ಇವರ ಮೊದಲ ಹೆಸರು ಬಿಂದ್ಯಾ ರಾಮ್ ಆಗಿತ್ತಂತೆ. 'ಬುಲ್ ಬುಲ್' ಸಿನಿಮಾ ಮಾಡುವ ಸಮಯದಲ್ಲಿ ಅವರ ಹೆಸರು ಬಿಂದ್ಯಾಯಿಂದ ರಚಿತಾ ರಾಮ್ ಆಗಿ ಬದಲಾಯಿತಂತೆ. ಬಿಂದ್ಯಾ ಎಂಬ ಹೆಸರು ಉತ್ತರ ಭಾರತದ ಶೈಲಿಯಲ್ಲಿ ಇದೇ ಎನ್ನುವ ಕಾರಣಕ್ಕೆ ಆ ಹೆಸರನ್ನು ಅವರು ಬದಲಾಯಿಸಿಕೊಂಡರಂತೆ. ವಿಶೇಷ ಅಂದರೆ, ರಚಿತಾ ರಾಮ್ ಎಂಬ ಹೆಸರನ್ನು ಸೂಚಿಸಿದ್ದು, ನಿರ್ದೇಶಕ ದಿನಕರ್ ತೂಗುದೀಪ ಹಾಗೂ ಗೀತರಚನೆಕಾರ ಕವಿರಾಜ್.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ