ಪುನೀತ್ ಪಿಎ ಎಂದು ಸುಳ್ಳು ಹೇಳಿ ಆತ ಮಾಡಿದ ಖತರನಾಕ್ ಕೆಲಸವೇನು ಗೊತ್ತೇ?

ಶನಿವಾರ, 14 ಜುಲೈ 2018 (13:58 IST)
ಬೆಂಗಳೂರು : ಇತ್ತೀಚೆಗಷ್ಟೇ ಸ್ಯಾಂಡಲ್ ವುಡ್ ನಟ ದರ್ಶನ್ ಅವರ  ಮ್ಯಾನೆಜರ್ ದರ್ಶನ್ ಅವರಿಗೆ ಮೋಸ ಮಾಡಿ ಹಣ ದೋಚಿಕೊಂಡು ಹೋದ ಘಟನೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಮತ್ತೊಬ್ಬ ಸ್ಯಾಂಡಲ್ ವುಡ್ ನಟನ  ಪಿಎ ಎಂದು ಹೇಳಿಕೊಂಡು ಹಣ ಸಂಗ್ರಹ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.


ಹೌದು. ರವಿ ಎಂಬಾತ ತಾನು ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್ ಪಿಎ ಅಂತ ಹೇಳಿಕೊಂಡು ತನ್ನ ತಂಗಿ ಮದುವೆಗಾಗಿ ಹಣ ಸಂಗ್ರಹಮಾಡಿ, ಅದ್ದೂರಿಯಾಗಿ ಮದುವೆ ಮಾಡಿದ್ದಾನಂತೆ. ಮೈಸೂರು ಜಿಲ್ಲೆ ಟಿ.ನರಸೀಪುರದ ಬನ್ನೂರಿನವನಾದ ರವಿ ಕಳೆದ 20 ವರ್ಷಗಳಿಂದ ಬೆಂಗಳೂರಿನ ವಾಸವಿದ್ದನು ಎನ್ನಲಾಗಿದೆ.


ಆದರೆ ಇತ್ತೀಚೆಗೆ ರವಿ ತನ್ನ ತಂಗಿ ಮದುವೆಗೆ ಹಣ ಹೊಂದಿಸುವ ಉದ್ದೇಶದಿಂದ ಊರಿಗೆ ಹೋಗಿ ಸಂಬಂಧಿಕರು, ಸ್ನೇಹಿತರಿಗೆ ನಾನು ಪುನೀತ್ ರಾಜ್ ಕುಮಾರ್ ಪಿಎಯಾಗಿದ್ದು, ನಿಮಗೆ ಸಿನಿಮಾದಲ್ಲಿ ಚಾನ್ಸ್ ಸೇರಿದಂತೆ ಪುನೀತ್ ಜೊತೆ ಕೆಲಸ ಮಾಡುವ ಅವಕಾಶ ನೀಡುತ್ತೇನೆ ಎಂದು ಹೇಳಿ , ಈಗ ಸದ್ಯಕ್ಕೆ ನನ್ನ ತಂಗಿ ಮದುವೆಗೆ ಹಣದ ಅವಶ್ಯಕತೆ ಇದ್ದು, ನನಗೆ ಹಣ ನೀಡಿ ಅಂತ ಮನವಿ ಮಾಡಿಕೊಂಡಿದ್ದಾನೆ. ಆದಕಾರಣ ರವಿ ಸ್ನೇಹಿತರು ಹಾಗೂ ಸಂಬಂಧಿಕರು ಲಕ್ಷ ಗಟ್ಟಲೇ ಹಣ ನೀಡಿದ್ದಾರಂತೆ.


ಆದರೆ ತಂಗಿ ಮದುವೆ ಮಾಡಿದ ನಂತರ ಆತ ತನ್ನ ಫೋನ್ ಅನ್ನು ಸ್ವೀಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಬನ್ನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ